ಗೋಕಾಕ:ದಿನಾಂಕ 21 ಶನಿವಾರದಂದು ಮಧ್ಯಾಹ್ನ 3:30 ಹಾಗೂ ಸಾಯಂಕಾಲ 6:30 ಕ್ಕೆ ಗೌಡ್ರ ಗದ್ಲ ನಾಟಕ : ನಟಿ ಪಂಕಜಾ ರವಿಶಂಕರ್

ದಿನಾಂಕ 21 ಶನಿವಾರದಂದು ಮಧ್ಯಾಹ್ನ 3:30 ಹಾಗೂ ಸಾಯಂಕಾಲ 6:30 ಕ್ಕೆ ಗೌಡ್ರ ಗದ್ಲ ನಾಟಕ : ನಟಿ ಪಂಕಜಾ ರವಿಶಂಕರ್
ಗೋಕಾಕ ಜೂ 18 : ಕಲಾವಿದಯರ ಸಹಾಯಾರ್ಥ ಮಾತೃಶ್ರೀ ಕಲಾಸಂಘ, ಸಾಯಿ ಸೇವಾ ಕಲ್ಚರಲ್ ಟ್ರಸ್ಟ್ ಬೆಂಗಳೂರು ಇವರಿಂದ ನಗರದ ಮಹಾಲಕ್ಷ್ಮಿ ಸಭಾಂಗಣದಲ್ಲಿ ದಿನಾಂಕ 21 ಶನಿವಾರದಂದು ಮಧ್ಯಾಹ್ನ 3:30 ಹಾಗೂ ಸಾಯಂಕಾಲ 6:30 ಕ್ಕೆ ಗೌಡ್ರ ಗದ್ಲ್ ಎಂಬ ನಾಟಕವನ್ನು ಆಯೋಜಿಸಲಾಗಿದ್ದು, ಕಲಾಭಿಮಾನಿ, ಕಲಾ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರಿಗೆ ಸಹಾಯ ಮಾಡುವಂತೆ ರಂಗ ಕಲಾವಿದೆ ಹಾಗೂ ಕರಿಮಣಿ ಧಾರಾವಾಹಿಯ ನಟಿ ಪಂಕಜಾ ರವಿಶಂಕರ್ ಹೇಳಿದರು.
ಬುಧವಾರದಂದು ನಗರದ ತಹಶೀಲ್ದಾರ ಕಛೇರಿಯಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇಂದಿನ ಆಧುನಿಕ ಭರಾಟೆಯಲ್ಲಿ ಮರೆಯಾಗುತ್ತಿರುವ ರಂಗಭೂಮಿ ಕಲೆಯನ್ನು ಬೆಳೆಸಲು ಹಾಗೂ ಕಲಾವಿದರು ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ಈ ನಾಟಕವನ್ನು ಆಯೋಜಿಸಲಾಗಿದೆ ಜನತೆ ರಂಗಭೂಮಿಯನ್ನು ಉಳಿಸಿ, ಬೆಳೆಸಲು ತನು,ಮನ ಧನದಿಂದ ಸಹಕಾರ ನೀಡುವಂತೆ ಕೋರಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಡಾ.ಮೋಹನ ಭಸ್ಮೆ, ರಂಗ ಕಲಾವಿದೆ ಲಲಿತಾ, ಸೋಮಶೇಖರ್ ಮಗದುಮ್ಮ, ಸದಾಶಿವ ಗುದಗಗೋಳ, ರಾಮಚಂದ್ರ ಕಾಕಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.