RNI NO. KARKAN/2006/27779|Wednesday, October 15, 2025
You are here: Home » breaking news » ಖಾನಾಪುರ:ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆನೆ ಬಲಿ : ಗೋಲಿಹಳ್ಳಿ ಅರಣ್ಯ ವಲಯದಲ್ಲಿ ಘಟನೆ

ಖಾನಾಪುರ:ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆನೆ ಬಲಿ : ಗೋಲಿಹಳ್ಳಿ ಅರಣ್ಯ ವಲಯದಲ್ಲಿ ಘಟನೆ 

ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆನೆ ಬಲಿ : ಗೋಲಿಹಳ್ಳಿ ಅರಣ್ಯ ವಲಯದಲ್ಲಿ ಘಟನೆ
ಖಾನಾಪೂರ ಅ 9 : ತಾಲೂಕಿನ ಗೋಲಿಹಳ್ಳಿ ಅರಣ್ಯ ವಲಯದ ತಾವರಗಟ್ಟಿ ಮತ್ತು ಬಿಷ್ಟೇನಟ್ಟಿ ಗ್ರಾಮಗಳ ನಡುವೆ ಸೋಮವಾರ ಬೆಳಗಿನ ಜಾವ ರೇಲ್ವೆ ಹಳಿ ದಾಟುವಾಗ ಚಲಿಸುವ ರೈಲು ಹೊಡೆದು ಅಪಘಾತ ಸಂಭವಿಸಿ 25 ಅಡಿ ಎತ್ತರದ ಸೇತುವೆಯಿಂದ ಕೆಳಕ್ಕೆ ಬಿದ್ದು ಆನೆ ಸಾವನ್ನಪ್ಪಿದೆ.

8-10 ವರ್ಷ ವಯಸ್ಸಿನ ಹೆಣ್ಣು ಆನೆ ಅಪಘಾತಕ್ಕೆ ಬಲಿಯಾಗಿದೆ.ಇದು ದಾಂಡೇಲಿ ಅರಣ್ಯ ಪ್ರದೇಶದಿಂದ ಗೋಲಿಹಳ್ಳಿ ಅರಣ್ಯಕ್ಕೆ ಆಹಾರ ಅರಸಿ ಬಂದಿರಬಹುದೆಂದು ಊಹಿಸಲಾಗುತ್ತಿದೆ.

ಘಟನಾ ಸ್ಥಳಕ್ಕೆ ಖಾನಾಪುರ ತಾಲೂಕಾ ದಂಡಾಧಿಕಾರಿ ಶಿವಾನಂದ ಉಳ್ಳೆಗಡ್ಡಿ, ನಾಗರಗಾಳಿ ವಲಯ ಅಧಿಕಾರಿ ಎಂ.ಬಿ.ಕುಸುನಾಳಿ, ಗೋಧೊಳ್ಳಿ ಉಪವಲಯ ಅಧಿಕಾರಿ ಪ್ರಕಾಶ ಮರೆಪ್ಪನವರ, ಅರಣ್ಯ ಅಧಿಕಾರಿಗಳಾದ ಶಿವಾನಂದ ನಿಂಗಾಣಿ, ಕರಲಿಂಗನ್ನವರ, ಎಂ.ಎಸ್.ರಾಠೋಡ, ಅರಣ್ಯ ರಕ್ಷಕರು, ಅರಣ್ಯ ವೀಕ್ಷಕರು ಹಾಜರಿದ್ದು ಘಟನೆಯ ತಪಾಸಣೆ ನಡೆಸುತ್ತಿದ್ದಾರೆ. ಕಾನೂನು ಪ್ರಕಾರ ಮೃತ ಆನೆಯ ಮರಣೋತ್ತರ ಪರೀಕ್ಷೆ ನಂತರ ಅಂತಿಮ ಸಂಸ್ಕಾರ ನಡೆಯುವುದೆಂದು ಹೆಳಲಾಗುತ್ತಿದೆ

Related posts: