RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:ನ 9ರಂದು ಗುಡ್ಡಾಪೂರಕ್ಕೆ ಪಾದಯಾತ್ರೆ

ಗೋಕಾಕ:ನ 9ರಂದು ಗುಡ್ಡಾಪೂರಕ್ಕೆ ಪಾದಯಾತ್ರೆ 

ನ  9ರಂದು ಗುಡ್ಡಾಪೂರಕ್ಕೆ ಪಾದಯಾತ್ರೆ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 3 :

ಪ್ರತಿ ವರ್ಷದಂತೆ ಈ ಬಾರಿಯೂ ಕಾರ್ತಿಕ ಮಾಸದ ನಿಮಿತ್ಯ ಇಲ್ಲಿನ ಶ್ರೀ ದಾನಮ್ಮದೇವಿ ಪಾದಯಾತ್ರಾ ಕಮೀಟಿವತಿಯಿಂದ ಪುಣ್ಯಕ್ಷೇತ್ರ ಗುಡ್ಡಾಪೂರಕ್ಕೆ ಇದೇ ಬುಧವಾರ ದಿ. 9ರಂದು ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗಿನಜಾವ 5ಕ್ಕೆ ನಗರದ ಸೋಮವಾರ ಪೇಟೆಯ ಶ್ರೀ ದಾನಮ್ಮದೇವಿ ಗುಡಿಯಿಂದ ಮಂಗಳಾರುತಿ ಸಲ್ಲಿಸುವ ಮೂಲಕ ಪಾದಯಾತ್ರೆಗೆ ಚಾಲನೆ ದೊರೆಯಲಿದೆ.
ಪಾದಯಾತ್ರೆಯು ಕಲ್ಲೋಳಿ, ಹಿಡಕಲ್, ಅಥಣಿ, ಯಲ್ಲಡಗಿ, ಕೊಟ್ಟಲಗಿ, ಸೊರಡಿ ಮುಖಾಂತರ ಸಾಗಿ, ಇದೇ ದಿ. 13ರಂದು ಪುಣ್ಯಕ್ಷೇತ್ರ ಗುಡ್ಡಾಪೂರವನ್ನು ತಲುಪುವುದು.
ಮಾರ್ಗದುದ್ದಕ್ಕೂ ಆಯಾ ಊರುಗಳ ದೇವಾಲಯಗಳ ಕಾರ್ತಿಕೋತ್ಸವ ಆಚರಣೆಯಲ್ಲಿ ಪಾಲ್ಗೊಳ್ಳುವುದು ಮತ್ತು ಅಲ್ಲಿಯ ಸದ್ಭಕ್ತ ಮಂಡಳಿಗಳು ಕಲ್ಪಿಸಲಿರುವ ಮಹಾಪ್ರಸಾದ ಸ್ವೀಕರಿಸಿ ವಾಸ್ತವ್ಯ ಮಾಡುವುದಿದೆ ಎಂದು ಪ್ರಕಟಣೆ ತಿಳಿಸಿದೆ.
ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿಚ್ಛಿಸುವ ಆಸಕ್ತ ಸದ್ಭಕ್ತರು ಪಾದಯಾತ್ರಾ ಉತ್ಸುವಾರಿ ಕಮೀಟಿಯ ಪ್ರವೀಣ ಚುನಮರಿ (9480327888), ಸೋಮನಾಥ ಮಗದುಮ್ (9481481444) ವ ಶೋಭಾ ಕುರಬೇಟ (9036673827) ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Related posts:

ಘಟಪ್ರಭಾ:ಅರಭಾವಿ ಪಟ್ಟಣದ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ 4.25 ಕೋಟಿ ರೂ. ಅನುದಾನ ಬಿಡುಗಡೆ : ಶಾಸಕ ಬಾಲಚಂದ್ರ

ಗೋಕಾಕ:ರಮೇಶ ಜಾರಕಿಹೊಳಿ ಅವರನ್ನು ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಲು ಫನ ತೊಟ್ಟಿದ್ದೇವೆ : ಡಾ.ಭೀಮಶಿ ಜಾರಕಿ…

ಗೋಕಾಕ:ನಾಡದ್ರೋಹಿ ಸಂಘಟನೆಗಳ ಪುಂಡಾಟಿಕೆ ಹೆಚ್ಚಾದರೆ ಮಹಾರಾಷ್ಟ್ರ ಗಡಿಯೋಳಗೆ ನುಗ್ಗಿ ಹೊಡೆಯುತ್ತೇವೆ : ಖಾನಪ್ಪನವರ ಕಿಡ…