ಘಟಪ್ರಭಾ:ಸ್ಚಚ್ಛಭಾರತ ಅಭಿಯಾನ ಯಶಸ್ವಿಗೆ ಎಲ್ಲರೂ ಶ್ರಮಿಸಬೇಕು : ಕ್ಯಾಪ್ಟನ್ ಪ್ರೀಯರಂಜನ ಶರ್ಮಾ
ಸ್ಚಚ್ಛಭಾರತ ಅಭಿಯಾನ ಯಶಸ್ವಿಗೆ ಎಲ್ಲರೂ ಶ್ರಮಿಸಬೇಕು : ಕ್ಯಾಪ್ಟನ್ ಪ್ರೀಯರಂಜನ ಶರ್ಮಾ
ಘಟಪ್ರಭಾ ಅ 3: ನೈರ್ಮಲ್ಯ ಕಾಪಾಡುವ ದೃಢ ಸಂಕಲ್ಪದ ಮೂಲಕ ಸ್ಚಚ್ಛಭಾರತ ಅಭಿಯಾನ ಯಶಸ್ವಿಗೆ ಎಲ್ಲರೂ ಶ್ರಮಿಸಬೇಕು. ನಮ್ಮ ಪರಿಸರ ಸ್ವಚ್ಛವಾಗಿರಬೇಕೆಂಬ ಭಾವ ಹೊಂದಬೇಕೆಂದು ಇಂಡೋ ಟಿಬೆಟಿಯನ್ ಗಡಿ ಪೊಲೀಸ್ ಪಡೆಯ ಸಹಾಯಕ ಕಮಾಂಡೆಟ್ ಕ್ಯಾಪ್ಟನ್ ಪ್ರೀಯರಂಜನ ಶರ್ಮಾ ಹೇಳಿದರು.
ಅವರು ಗಾಂಧಿ ಜಯಂತಿ ಹಾಗೂ ಸ್ವಚ್ಛ ಭಾರತ ಅಭಿಯಾನದ ನಿಮಿತ್ತ ಅಲೈನ್ಸ್ ಗ್ರುಪ್ ಆಫ್ ಘಟಪ್ರಭಾ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸಮೀಪದ ಗೋಕಾಕ ಜಲಪಾತ ಬಳಿಯ ಮಹಾಲಿಂಗೇಶ್ವರ ದೇವಸ್ಥಾನದ ಎದುರು ನಡೆದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಲೈನ್ಸ್ ಗ್ರುಪ್ ಆಫ್ ಘಟಪ್ರಭಾದ ಅಧ್ಯಕ್ಷ ಗಂಗಾಧರ ಬಡಕುಂದ್ರಿ ಮಾತನಾಡಿ, ಸ್ವಚ್ಛ ಭಾರತ ಅಭಿಯಾನದ ಪರಿಕಲ್ಪನೆ ಬಗ್ಗೆ ವಿವರಿಸಿ, ಪರಿಸರ ಚೆನ್ನಾಗಿದ್ದರೆ ಮಾತ್ರ ಶುದ್ಧ ಗಾಳಿ, ನೀರು ದೊರಕುತ್ತದೆ. ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡು ಸುಂದರ ಸಮಾಜ ನಿರ್ಮಾಣ ಮಾಡಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಶ್ರೀಶೈಲ ಹಿರೇಮಠ, ಡಾ.ಎಂ.ಎಂ.ಹೂಗಾರ, ಎಸ್.ಎಚ್.ಗಿರಡ್ಡಿ, ಎಸ್.ಡಿ. ದಡ್ಡಿಕರ, ಬಾಬುರಾವ ಬಡಕುಂದ್ರಿ, ಪ್ರಕಾಶ ಬಡಕುಂದ್ರಿ, ಅಣ್ಣಪ್ಪ ಪುಠಾಣಿ, ರಾಯಪ್ಪ, ರಾಜೇಶ ನಾಯಿಕ, ರಾವುಹಾಲಟ್ಟಿ, ಭೀಮಪ್ಪ ಮದಿಹಳ್ಳಿ, ಪೆÇಲಿಸ್ ಪಡೆಯ ಸಿಬ್ಬಂದಿ ಬಾಳಪ್ಪ ನಾಯಿಕ, ಸುರೇದ್ರಸಿಂಗ್, ರಾಜೇಶ ನಾಯಿಕ, ರಾವುತಾಪ ಸೇರಿದಂತೆ ಇತರರು ಇದ್ದರು.