RNI NO. KARKAN/2006/27779|Tuesday, August 5, 2025
You are here: Home » breaking news » ಗೋಕಾಕ:ಪರಿಸರವಿಲ್ಲದೆ ಮಾನವನ ಬದುಕು ಅಸಾಧ್ಯ : ಗಜಾನನ ಮನ್ನಿಕೇರಿ

ಗೋಕಾಕ:ಪರಿಸರವಿಲ್ಲದೆ ಮಾನವನ ಬದುಕು ಅಸಾಧ್ಯ : ಗಜಾನನ ಮನ್ನಿಕೇರಿ 

ಪರಿಸರವಿಲ್ಲದೆ ಮಾನವನ ಬದುಕು ಅಸಾಧ್ಯ : ಗಜಾನನ ಮನ್ನಿಕೇರಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 11 :

 

ಪರಿಸರವಿಲ್ಲದೆ ಮಾನವನ ಬದುಕು ಅಸಾಧ್ಯ, ಅರಣ್ಯವನ್ನು ಉಳಿಸಿ, ಬೆಳೆಸಿ ಪರಿಸರ ರಕ್ಷಣೆ ಮಾಡುವಂತೆ ಧಾರವಾಡದ ಅಪರ ಆಯುಕ್ತರ ಕಾರ್ಯಾಲಯದ ಸಹ ನಿರ್ದೇಶಕ ಗಜಾನನ ಮನ್ನಿಕೇರಿ ಹೇಳಿದರು.
ಶನಿವಾರದಂದು ಅರಣ್ಯ ಇಲಾಖೆಯ ನರ್ಸರಿಯಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ಶಿಕ್ಷಣ ಇಲಾಖೆಯವರು ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಬೀಜ ಉಂಡೆ ತಯಾರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ನಿಸರ್ಗ ಎಲ್ಲಾ ಜೀವಿಗಳಿಗೆ ರಕ್ಷಣೆ ನೀಡುತ್ತಿದೆ. ಜೀವಿಗಳು ಬದುಕಲು ಆಮ್ಲಜನಕ, ನೀರು ಆಹಾರ ಸೇರಿದಂತೆ ಅತೀ ಅವಶ್ಯಕ ವಸ್ತುಗಳನ್ನು ನೀಡುತ್ತಿದ್ದು, ಇದರ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಪರಿಸರ ರಕ್ಷಣೆಯ ಮನೋಭಾವವನ್ನು ಬೆಳೆಸಿಕೊಂಡು ಇತರರಿಗೆ ಅರಿವು ಮೂಡಿಸಬೇಕು. ಜಿಲ್ಲೆಯಾದ್ಯಂತ 10 ಲಕ್ಷ ಬೀಜದ ಉಂಡೆಗಳನ್ನು ತಯಾರಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ್ವರಿ ಈರನಟ್ಟಿ, ವಲಯ ಅರಣ್ಯ ಅಧಿಕಾರಿ ಕೆ.ಎನ್.ವಣ್ಣೂರ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಶಿಕ್ಷಣಾಧಿಕಾರಿಗಳಾದ ಎಂ.ಬಿ.ಪಾಟೀಲ, ಎಲ್.ಕೆ ತೋರಣಗಟ್ಟಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ನ ವಿದ್ಯಾರ್ಥಿಗಳು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು .

Related posts:

ಗೋಕಾಕ:ಮುಖ್ಯಮಂತ್ರಿಗಳ ಹೇಳಿಕೆಯಿಂದ ಎಚ್ಚರಗೊಂಡ ತಹಶೀಲ್ದಾರ : ನಾಳೆಯಿಂದ ಗೋಕಾಕದಲ್ಲಿ ಯಾವುದೇ ಲಾಕಡೌನ ಇರುವುದಿಲ್ಲ ಪ್…

ಗೋಕಾಕ:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗೋಕಾಕ ತಾಲೂಕು ಅಧ್ಯಕ್ಷರಾಗಿ ಗುರುಸಿದ್ದಪ್ಟ ಪೂಜೇರಿ, ಪ್ರಧಾನ ಕಾರ್ಯದರ್ಶ…

ಗೋಕಾಕ:ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕು ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರನ್ನು ‌ಒಳ್ಳೆಯ ಪ್ರಜೆಗಳನ್ನ…