ಗೋಕಾಕ:ಜಲಪ್ರಳಯ ಮತ್ತು ಮಾತೃಹೃದಯಿ ಗ್ರಂಥಗಳು ಗೋಕಾಕ ನಾಡಿನ ಸಾಹಿತ್ಯದ ಹಿರಿಮೆ ಗರಿಮೆಯನ್ನು ಹೆಚ್ಚಿಸಿವೆ : ಕರವೇ ಮುಖಂಡ ಖಾನಪ್ಪನವರ
ಜಲಪ್ರಳಯ ಮತ್ತು ಮಾತೃಹೃದಯಿ ಗ್ರಂಥಗಳು ಗೋಕಾಕ ನಾಡಿನ ಸಾಹಿತ್ಯದ ಹಿರಿಮೆ ಗರಿಮೆಯನ್ನು ಹೆಚ್ಚಿಸಿವೆ : ಕರವೇ ಮುಖಂಡ ಖಾನಪ್ಪನವರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 7 :
ಪತ್ರಕರ್ತ ಸಾದಿಕ ಹಲ್ಯಾಳ ರಚಿಸಿರುವ ಜಲಪ್ರಳಯ ಮತ್ತು ಮಾತೃಹೃದಯಿ ಗ್ರಂಥಗಳು ಕರ್ನಾಟಕ ಸರಕಾರದ ಸಾರ್ವಜನಿಕ ಗ್ರಂಥಾಲಯಕ್ಕೆ ಆಯ್ಕೆಯಾಗಿರುದರ ಮೂಲಕ ಗೋಕಾಕ ನಾಡಿನ ಸಾಹಿತ್ಯದ ಹಿರಿಮೆ ಗರಿಮೆಯನ್ನು ಹೆಚ್ಚಿಸಿದೆ ಎಂದು ಕನ್ನಡಪರ ಹೋರಾಟಗಾರ ಬಸವರಾಜ ಖಾನಪ್ಪನವರ ಹೇಳಿದರು.
ಗುರುವಾರದಂದು ನಗರದ ಕರವೇ ತಾಲೂಕು ಘಟಕದ ವತಿಯಿಂದ ಕರವೇ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಸರಳ ಸಮಾರಂಭದಲ್ಲಿ ಸಾಹಿತಿ, ಪತ್ರಕರ್ತ ಸಾದಿಕ ಹಲ್ಯಾಳ ಅವರನ್ನು ಸತ್ಕಾರಿಸಿ ಅವರು ಮಾತನಾಡಿದರು .
ತಮ್ಮ ಪತ್ರಿಕಾ ವೃತ್ತಿಯ ಜೊತೆಗೆ ಸಾದಿಕ ಅವರು ಇಲ್ಲಿಯ ವರೆಗೆ ಸಾಹಿತ್ಯ ಲೋಕಕ್ಕೆ 5 ಮೌಲಿಕ ಗ್ರಂಥಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅದರಲ್ಲಿ ಛಲಗಾರ, ಜಲಪ್ರಳಯ ಹಾಗೂ ಮುರುಘರಾಜೇಂದ್ರ ಮಹಾಸ್ವಾಮಿಗಳ ಅಭಿನಂದನ ಗ್ರಂಥ ಮಾತೃ ಹೃದಯಿ ಗ್ರಂಥಗಳನ್ನು ಸರಕಾರ ಸಾರ್ವಜನಿಕ ಗ್ರಂಥಾಲಯಕ್ಕೆ ಆಯ್ಕೆ ಮಾಡುವ ಮೂಲಕ ಸಾದಿಕ ಅವರ ಬರವಣಿಗೆ ಮೌಲ್ಯವನ್ನು ಹೆಚ್ಚಿಸಿದೆ. ಇವರ ಲೇಖನಿಯಿಂದ ಇನ್ನೂ ಹಲವಾರು ಗ್ರಂಥಗಳು ಹೊರಬಂದು ಸಾಹಿತ್ಯ ಲೋಕ ಇನ್ನಷ್ಟು ಮತ್ತಷ್ಟು ಶ್ರೀಮಂತವಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೃಷ್ಣಾ ಖಾನಪ್ಪನವರ, ದೀಪಕ ಹಂಜಿ, ನಿಜಾಮ ನಧಾಪ, ಬಸವರಾಜ ಗಾಡಿವಡ್ಡರ, ಮಹಾದೇವ ಮಕ್ಕಳಗೇರಿ, ರಾಜೇಂದ್ರ ಕೆಂಚನಗುಡ್ಡ, ಮಾಯಪ್ಪ ತಹಶೀಲ್ದಾರ, ರಾಮ ಕುಡ್ಡೆಮ್ಮಿ, ರಾಮ ಕೊಂಗನೋಳಿ, ರಾಜು ಪೂಜೇರಿ, ಲಕ್ಷ್ಮೀಕಾಂತ ದಳವಾಯಿ, ಶಿವಲಿಂಗ ಮೆಗೇಡಿ, ರಮಜಾನ ಅಂಗಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.