RNI NO. KARKAN/2006/27779|Thursday, January 15, 2026
You are here: Home » breaking news » ಗೋಕಾಕ:ವಿದ್ಯಾರ್ಥಿಗಳು ಶಿಸ್ತು ಮತ್ತು ಕಠಿಣ ಶ್ರಮದಿಂದ ತಮ್ಮ ಬದುಕನ್ನು ರೂಪಿಸಿಕೊಳ್ಳಿ : ಪ್ರಾಚಾರ್ಯ ಐ.ಎಸ್.ಪವಾರ

ಗೋಕಾಕ:ವಿದ್ಯಾರ್ಥಿಗಳು ಶಿಸ್ತು ಮತ್ತು ಕಠಿಣ ಶ್ರಮದಿಂದ ತಮ್ಮ ಬದುಕನ್ನು ರೂಪಿಸಿಕೊಳ್ಳಿ : ಪ್ರಾಚಾರ್ಯ ಐ.ಎಸ್.ಪವಾರ 

ವಿದ್ಯಾರ್ಥಿಗಳು ಶಿಸ್ತು ಮತ್ತು ಕಠಿಣ ಶ್ರಮದಿಂದ ತಮ್ಮ ಬದುಕನ್ನು ರೂಪಿಸಿಕೊಳ್ಳಿ : ಪ್ರಾಚಾರ್ಯ ಐ.ಎಸ್.ಪವಾರ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 26 :
ವಿದ್ಯಾರ್ಥಿಗಳು ಶಿಸ್ತು ಮತ್ತು ಕಠಿಣ ಶ್ರಮದಿಂದ ತಮ್ಮ ಬದುಕನ್ನು ರೂಪಿಸಿಕೊಳ್ಳುವಂತೆ ಎಸ್.ಎಲ್.ಜೆ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಐ.ಎಸ್.ಪವಾರ ಹೇಳಿದರು.

ಶನಿವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಪೂರ್ವ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.

ವಿದ್ಯಾರ್ಥಿ ಜೀವನದಲ್ಲಿ ಪಿ.ಯು.ಸಿ ಮಹತ್ವದ ಘಟ್ಟವಾಗಿದೆ. ಗುರುಗಳ ಮಾರ್ಗದರ್ಶನದಲ್ಲಿ ಪ್ರಯತ್ನ ಶೀಲರಾಗಿ ಪ್ರತಿಭಾವಂತರಾಗಿ ಪಾಲಕರ ಕನಸನ್ನು ನನಸಾಗಿಸಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸುವಂತೆ ಕರೆ ನೀಡಿದರು.

ಕಾರ್ಯಕ್ರಮವನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಉದ್ಘಾಟಿಸಿದರು.
ವೇದಿಕೆಯ ಮೇಲೆ ಪ್ರಾಚಾರ್ಯ ಅರುಣ ಪೂಜೇರ, ಉಪನ್ಯಾಸಕರಾದ ಎನ್.ಕೆ ಮೀರಾಶಿ, ವಿ.ಬಿ.ಕನಿಲದಾರ, ವಿದ್ಯಾರ್ಥಿ ಪ್ರತಿನಿಧಿಗಳಾದ ರಂಜಿತಾ ಕಂಬಳಿ, ಬಾಳೇಶ ಗಸ್ತಿ ಇದ್ದರು.

Related posts: