ಬೆಳಗಾವಿ:ರೂಬೆಲ್ಲಾ ಚುಚ್ಚುಮದ್ದು ಮೂವರ ಮಕ್ಕಳ ಸಾವು ಪ್ರಕರಣ : ಸಾಲಹಳ್ಳಿ ಆರೋಗ್ಯ ಕೇಂದ್ರ ಸಿಬ್ಬಂದಿ ಅಮಾನತು
ರೂಬೆಲ್ಲಾ ಚುಚ್ಚುಮದ್ದು ಮೂವರ ಮಕ್ಕಳ ಸಾವು ಪ್ರಕರಣ : ಸಾಲಹಳ್ಳಿ ಆರೋಗ್ಯ ಕೇಂದ್ರ ಸಿಬ್ಬಂದಿ ಅಮಾನತು
ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಜ 17:
ರಾಮದುರ್ಗ ತಾಲೂಕಿನಲ್ಲಿ ಚುಚ್ಚುಮದ್ದು ಪಡೆದ ಮಕ್ಕಳ ಸಾವು ಪ್ರಕರಣ ಸಂಬಂಧ ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಈ ಬಗ್ಗೆ ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿಕಾಂತ ಮುನ್ನಾಳ ಮಾಹಿತಿ ನೀಡಿದ್ದು, ಪ್ರಾಥಮಿಕ ಕೇಂದ್ರ ಆರೋಗ್ಯ ಸಹಾಯಕಿ ಸಲ್ಮಾ ಮಾಹಾತ್, ಔಷಧಿ ವಿತರಕ ಜಯರಾಜ ಕುಂಬಾರ ಎನ್ನುವವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗೂ ನೋಟಿಸ್ ಜಾರಿ ಮಾಡಲಾಗಿದ್ದು, ಸಿಬ್ಬಂದಿ ಚುಚ್ಚುಮದ್ದು ನೀಡುವಾಗ ಕೋಲ್ಡ್ ಚೈನ್ ಬ್ರೇಕ್ ಮಾಡಿದಲ್ಲದೇ, ಅನುಸರಿಸಬೇಕಾದ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ ಎನ್ನಲಾಗಿದೆ
Related posts:
ಗೋಕಾಕ:ಕೊರೊನಾ ವೈರಸ್ಸಿನ್ ಬಿಕ್ಕಟ್ಟು : ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ನೆರವಿಗೆ ಧಾವಿಸಬೇಕು: ಭೀಮಶಿ ಗದಾಡಿ
ಘಟಪ್ರಭಾ:ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸ್ವಂತ ವೆಚ್ಚ: ಕೊರೋನಾ ಸೊಂಕಿತರಿಗೆ ಆಮ್ಲಜನಕ ಪೂರೈಕೆ ಘಟಕ ಆರಂಭ : ತಹಶೀಲ್…
ಮೂಡಲಗಿ:ಕಲ್ಲೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಗ್ರಾಮೀಣ ಪ್ರದೇಶಗಳ ರೈತರಿಗೆ ಜೀವನಾಡಿಯಾಗಿದೆ : ಶಾಸಕ ಬಾಲಚಂ…
