ಗೋಕಾಕ:ವಲಯದ 59 ಪ್ರೌಢಶಾಲೆಗಳು ಎ ಗ್ರೇಡ್ ಪಡೆದು ಸಾಧನೆ : ಬಿಇಒ ಜಿ.ಬಿ.ಬಳಗಾರ ಮಾಹಿತಿ
ವಲಯದ 59 ಪ್ರೌಢಶಾಲೆಗಳು ಎ ಗ್ರೇಡ್ ಪಡೆದು ಸಾಧನೆ : ಬಿಇಒ ಜಿ.ಬಿ.ಬಳಗಾರ ಮಾಹಿತಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 10
ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಗೋಕಾಕ ವಲಯದ 59 ಪ್ರೌಢಶಾಲೆಗಳು ಎ ಗ್ರೇಡ್ ಪಡೆದು ಸಾಧನೆ ಮಾಡಿದ್ದಾರೆ ಎಂದು ಬಿಇಒ ಜಿ.ಬಿ.ಬಳಗಾರ ತಿಳಿಸಿದ್ದಾರೆ .
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು ಎ ಪ್ಲಸ್ ಗ್ರೇಡ್ನಲ್ಲಿ 1768 ವಿದ್ಯಾರ್ಥಿಗಳು ಪಾಸಾಗಿದ್ದರೆ, ಎ ಗ್ರೇಡ್ನಲ್ಲಿ 1863 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಬಿನಲ್ಲಿ 838 ವಿದ್ಯಾರ್ಥಿಗಳು, ಸಿ ಗ್ರೇಡ್ನಲ್ಲಿ 47 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಲಯದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಖನಗಾಂವ ವಿದ್ಯಾರ್ಥಿನಿ ಕುಮಾರಿ ಅನುರಾಧ ಕಮ್ಮಾರ 625ಕ್ಕೆ 623 ಅಂಕ ಪಡೆದಿದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಮುರಾರ್ಜಿ ದೇಸಾಯಿ ವಸತಿ ಶಾಲೆ ಹಿರೇನಂದಿ ಶಾಲೆಯ ವಿದ್ಯಾರ್ಥಿಗಳು ಕುಮಾರಿ ಶ್ವೇತಾ ವಗ್ಗರ ಹಾಗೂ ಕುಮಾರಿ ನಂದಿತಾ ಗಾಣಿಗೇರ 621 ಅಂಕ ಪಡೆದು ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕುಮಾರ ಪ್ರಥಮ ಪಾಟೀಲ.. ಕುಮಾರ ಧರೆಪ್ಪ ಕುರಬೇಟ.. ಕುಮಾರ ಧನಂಜಯ ಹೊನ್ನತ್ತಿ.. ಕುಮಾರಿ ಶ್ರೇಯಾ ಹಳಿಗೌಡರ. ವಿದ್ಯಾರ್ಥಿಗಳು 620 ಅಂಕ ಪಡೆದು ತಾಲೂಕಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಸಾಧನೆ ಗೈದ ಎಲ್ಲಾ ವಿದ್ಯಾರ್ಥಿಗಳನ್ನು ಶಿಕ್ಷಕರನ್ನು ಮತ್ತು ಸಿಬ್ಬಂದಿಗಳನ್ನು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅಭಿನಂದಿಸಿದ್ದಾರೆ ಬಳಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.