RNI NO. KARKAN/2006/27779|Sunday, July 13, 2025
You are here: Home » breaking news » ಗೋಕಾಕ:ನಾಳೆಯಿಂದ ಶ್ರೀಗಳ ನಡಿಗೆ ಭಕ್ತರ ಮನೆಗಳ ಕಡೆಗೆ : ಕೊರೋನಾ ಜಾಗೃತಿಗಾಗಿ ವಿಶಿಷ್ಟ ಹೆಜ್ಜೆ ಇಟ್ಟ ಮುರುಘಾಜೇಂದ್ರ ಮಹಾಸ್ವಾಮಿಗಳು

ಗೋಕಾಕ:ನಾಳೆಯಿಂದ ಶ್ರೀಗಳ ನಡಿಗೆ ಭಕ್ತರ ಮನೆಗಳ ಕಡೆಗೆ : ಕೊರೋನಾ ಜಾಗೃತಿಗಾಗಿ ವಿಶಿಷ್ಟ ಹೆಜ್ಜೆ ಇಟ್ಟ ಮುರುಘಾಜೇಂದ್ರ ಮಹಾಸ್ವಾಮಿಗಳು 

ನಾಳೆಯಿಂದ ಶ್ರೀಗಳ ನಡಿಗೆ ಭಕ್ತರ ಮನೆಗಳ ಕಡೆಗೆ : ಕೊರೋನಾ ಜಾಗೃತಿಗಾಗಿ ವಿಶಿಷ್ಟ ಹೆಜ್ಜೆ ಇಟ್ಟ ಮುರುಘಾಜೇಂದ್ರ ಮಹಾಸ್ವಾಮಿಗಳು

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 8 :

 
ಶ್ರಾವಣ ಮಾಸದ ಪ್ರಯುಕ್ತ ಸೋಮವಾರದಿಂದ ಒಂದು ತಿಂಗಳಕಾಲ ಶ್ರೀಗಳ ನಡಿಗೆ ಭಕ್ತರ ಮನೆ ಕಡೆಗೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶೂನ್ಯ ಸಂಪಾದನ ಮಠದ ಶ್ರೀ ಮುರುಘಾಜೇಂದ್ರ ಮಹಾಸ್ವಾಮಿಗಳು ತಿಳಿಸಿದ್ದಾರೆ ‌.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊರೋನಾ, ಲಾಕಡೌನ ನಿಂದ ಜನರ ಜೀವನ ಅಸ್ತವ್ಯಸ್ತಗೊಂಡಿದ್ದು, ಸಾರ್ವಜನಿಕರು ಎಲ್ಲೂ ಹೋಗದೆ ಮನೆಯಲ್ಲಿಯೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ಶ್ರಾವಣ ಮಾಸವನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಿದ್ದು, ಪ್ರತಿ ದಿನ ಒಬ್ಬ ಭಕ್ತರ ಮನೆಗೆ ತೆರಳಿ ವಚನ ಚಿಂತನೆ ಮತ್ತು ವಚನ ಪ್ರಾರ್ಥನೆ ಮಾಡಿ ಭಕ್ತರ ಆತ್ಮವಿಶ್ವಾಸ ಹೆಚ್ಚಿಸಲಾಗುವುದು. ಕೋರೋನಾ ನಿಯಂತ್ರಣ ಬಗ್ಗೆ ಭಕ್ತ ಸಮೂಹದಲ್ಲಿ ಜಾಗೃತಿ ಮೂಡಿಸಲಾಗುವದು. ಕೊರೋನಾ ಮೂರನೇ ಅಲೆಯ ಹರಡದಂತೆ ರಾಜ್ಯ ಸರಕಾರ ವಾರಾಂತ್ಯದ ಕರ್ಪ್ಯೂ ವಿಧಿಸಿದ್ದು, ರಾತ್ರಿ 9 ಘಂಟೆಯಿಂದ ನೈಟ್ ಕರ್ಪ್ಯೂ ಘೋಷಿಸಲಾಗಿದೆ. ಸರಕಾರದ ಪ್ರತಿಯೊಂದು ಮಾರ್ಗಸೂಚಿಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಿ ಕೊರೋನಾ ಹರಡದಂತೆ ಸಹಕರಿಸಬೇಕೆಂದು ಶ್ರೀ ಮುರುಘಾಜೇಂದ್ರ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

Related posts: