RNI NO. KARKAN/2006/27779|Friday, May 9, 2025
You are here: Home » breaking news » ಗೋಕಾಕ:ಬಸ ನಿಲ್ದಾಣದ ಹಿಂದುಗಡೆ ಸಿಕ್ಕಿದ ಅಪರಿಚಿತ ವ್ಯಕ್ತಿ ಸಾವು

ಗೋಕಾಕ:ಬಸ ನಿಲ್ದಾಣದ ಹಿಂದುಗಡೆ ಸಿಕ್ಕಿದ ಅಪರಿಚಿತ ವ್ಯಕ್ತಿ ಸಾವು 

ಬಸ ನಿಲ್ದಾಣದ ಹಿಂದುಗಡೆ ಸಿಕ್ಕಿದ ಅಪರಿಚಿತ ವ್ಯಕ್ತಿ ಸಾವು

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 26 :

 

ನಗರದ ಬಸ ನಿಲ್ದಾಣದ ಹಿಂದುಗಡೆ ಅಪರಿಚಿತ ವ್ಯಕ್ತಿಯೋರ್ವನು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಳೆದ ದಿ. 18 ರಂದು ಸಿಕ್ಕಿದ್ದು, ಆತನನ್ನು ನಗರದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿತ್ತು.ಚಿಕಿತ್ಸೆ ಫಲಿಸದೆ ಆತನು ದಿ.24 ರಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ

ಬೆಳಗಾವಿ ಬಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಇತನ ಶವವನ್ನು ಇರಿಸಲಾಗಿದ್ದು, ಸದರಿ ಅವರ ವಾರಸುದಾರರು ಯಾರಾದರೂ ಇದ್ದರೆ ಗೋಕಾಕ ನಗರ ಪೊಲೀಸ ಠಾಣೆಗೆ ಸಂರ್ಪಕಿಸಲು ಕೋರಲಾಗಿದೆ.

ಮೃತನು 40 ರಿಂದ 45 ವರ್ಷ ವಯಸ್ಸಿನವನಾಗಿದ್ದು, ತಿಳಿ ಗೆಂಪು , ಬಿಳಿ ನಿಲಿ ಬಣ್ಣದ ಗೇರೆ ಗೇರೆ ಇರುವ ಚೌಕಡಾ ಶರ್ಟ್ ಹಾಗೂ ಚಾಕಲೇಟ್ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ದುಂಡು ಮುಖದ ಈ ವ್ಯಕ್ತಿ ದಪ್ಪ ಮೂಗು ಕುರುಚಲ ಗಡ್ಡ ಇದ್ದು, ಬಲಗೈ ಮೊಣಕೈ ಕೆಳಗೆ ಹರೆ ಗಾಯದ ಕಲೆಗಳಿವೆ ಎಂದು ಪೋಲೀಸ ಮೂಲಗಳು ತಿಳಿಸಿವೆ.

Related posts: