RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ :ಬಂಧಿಗಳ ಮನ: ಪರಿವರ್ತನೆ ಮತ್ತು “ದಂಡಿ” ಕಾದಂಬರಿ ಬಿಡುಗಡೆ : ಅಧೀಕ್ಷಕ ಅಂಬರೀಷ ಪೂಜಾರಿ ಮಾಹಿತಿ

ಗೋಕಾಕ :ಬಂಧಿಗಳ ಮನ: ಪರಿವರ್ತನೆ ಮತ್ತು “ದಂಡಿ” ಕಾದಂಬರಿ ಬಿಡುಗಡೆ : ಅಧೀಕ್ಷಕ ಅಂಬರೀಷ ಪೂಜಾರಿ ಮಾಹಿತಿ 

ಬಂಧಿಗಳ ಮನ: ಪರಿವರ್ತನೆ ಮತ್ತು “ದಂಡಿ” ಕಾದಂಬರಿ ಬಿಡುಗಡೆ : ಅಧೀಕ್ಷಕ ಅಂಬರೀಷ ಪೂಜಾರಿ ಮಾಹಿತಿ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 26 :
ಕಾರಾಗೃಹ ಮತ್ತು ಸುಧಾರಣೆ ಸೇವೆ ಉಪಕಾರಾಗೃಹ ಗೋಕಾಕ, ಚುಟುಕು ಸಾಹಿತ್ಯ ಪರಿಷತ್, ಮತ್ತು ಕನ್ನಡ ಸಾಹಿತ್ಯ ಪರಿಷತ್ ಇವರ ಸಹಯೋಗದಲ್ಲಿ ಇಲ್ಲಿಯ ಉಪಕಾರಾಗೃಹದ ಆವರಣದಲ್ಲಿ ದಿ. 28 ರಂದು ಮುಂಜಾನೆ 9.30 ಗಂಟೆಗೆ ರಾಗಂರವರಿಂದ ಬಂಧಿಗಳ ಮನ: ಪರಿವರ್ತನೆ ಮತ್ತು “ದಂಡಿ” ಕಾದಂಬರಿ ಬಿಡುಗಡೆ ಸಮಾರಂಭ ಜರುಗಲಿದೆ.
ಸಮಾರಂಭವನ್ನು ಕಸಾಪ ತಾಲೂಕಾಧ್ಯಕ್ಷ ಮಹಾಂತೇಶ ತಾಂವಶಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಪ್ರೋ ಚಂದ್ರಶೇಖರ ಅಕ್ಕಿ ವಹಿಸಲಿದ್ದು, ಮುಖ್ಯಅತಿಥಿಗಳಾಗಿ ಧಾರವಾಡದ ಪ್ರೋ, ಜಿ.ಜಿ.ಮಠಪತಿ, ರಾಜ್ಯ ಮಾನವ ಹಕ್ಕುಗಳ ಆಯೋಗದ ಶ್ರೀಮತಿ ಪದ್ಮಶ್ರೀರಾಗಂ, ಹೊಸಪೇಟೆಯ ಸವಿತಾ ಯಾಜಿ, ಹಿರಿಯ ಸಾಹಿತಿ ಮಹಾಲಿಂಗ ಮಂಗಿ ಉಪಸ್ಥಿತರಿರುವರು. ದಂಡಿ ಕಾದಂವರಿಯನ್ನು ಜೈಲಿನ ಬಂಧಿಗಳು ಬಿಡುಗಡೆ ಮಾಡುವರು ಎಂದು ಉಪಕಾರಾಗೃಹದ ಅಧೀಕ್ಷಕ ಅಂಬರೀಷ ಪೂಜಾರಿ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts: