RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಕರ್ನಾಟಕ ಬಂದ ಬೆಂಬಲಿಸಿ ಗೋಕಾಕದಲ್ಲಿ ಕನ್ನಡಪರ ಸಂಘಟನೆಗಳ ಪ್ರತಿಭಟನೆ

ಗೋಕಾಕ:ಕರ್ನಾಟಕ ಬಂದ ಬೆಂಬಲಿಸಿ ಗೋಕಾಕದಲ್ಲಿ ಕನ್ನಡಪರ ಸಂಘಟನೆಗಳ ಪ್ರತಿಭಟನೆ 

ಕರ್ನಾಟಕ ಬಂದ ಬೆಂಬಲಿಸಿ ಗೋಕಾಕದಲ್ಲಿ ಕನ್ನಡಪರ ಸಂಘಟನೆಗಳ ಪ್ರತಿಭಟನೆ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 5 :

 
ರಾಜ್ಯ ಸರ್ಕಾರ ಮರಾಠಾ ಅಭಿವೃದ್ದಿ ನಿಗಮ ಸ್ಥಾಪಿಸಿದನ್ನು ಖಂಡಿಸಿ ರಾಜ್ಯಾಧ್ಯಾಂತ್ಯ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಕರೆ ಹಿನ್ನೆಲೆಯಲ್ಲಿ ಇಲ್ಲಿಯ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಶನಿವಾರದಂದು ಬಸವೇಶ್ವರ ವೃತ್ತದಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಯ ಮುಖಂಡರಾದ ಕಿರಣ ಡಮಾಮಗರ, ಸಂತೋಷ ಖಂಡ್ರಿ, ಮಲ್ಲಿಕ ತಳವಾರ, ಯಲ್ಲಪ್ಪ ಗೌಡರ, ಅರುಣ ರಂಗಸುಭೆ, ಅಜೀಜ ಮೋಕಾಶಿ, ಅಮೀತ ಗೂಡವಾಲೆ, ಮುಬಾರಕ ಬಾಳೆಕುಂದ್ರಿ, ದುರ್ಗಪ್ಪ ಬಾಗಲಕೋಟೆ, ಕಲ್ಲಯ್ಯ ಮಠಪತಿ ಸೇರಿದಂತೆ ಅನೇಕರು ಇದ್ದರು.
ಬಂದ್ ಕರೆಯು ಗೋಕಾಕ ನಗರದಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು ಅಂಗಡಿ-ಮುಂಗಡಗಳು ಎಂದಿನಂತೆ ವ್ಯಾಪಾರ ವಹಿವಾಟ ನಡಿಸಿದರೇ ಬಸ್ ಹಾಗೂ ವಾಹನಗಳ ಸಂಚಾರ ದಿನನಿತ್ಯದಂತೆ ಯಾವುದೇ ಅಡೆತಡೆಗಳು ಇಲ್ಲದೇ ಸಂಚರಿಸಿದರೇ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

Related posts: