RNI NO. KARKAN/2006/27779|Friday, October 17, 2025
You are here: Home » breaking news » ಗೋಕಾಕ:ಪಂಪಸೆಟ್ ನೋಡಲು ಹೋದ ಯುವಕ ಕಾಲು ಜಾರಿ-ಬಳ್ಳಾರಿ ನಾಲಾ ಪಾಲು

ಗೋಕಾಕ:ಪಂಪಸೆಟ್ ನೋಡಲು ಹೋದ ಯುವಕ ಕಾಲು ಜಾರಿ-ಬಳ್ಳಾರಿ ನಾಲಾ ಪಾಲು 

ಪಂಪಸೆಟ್ ನೋಡಲು ಹೋದ ಯುವಕ ಕಾಲು ಜಾರಿ-ಬಳ್ಳಾರಿ ನಾಲಾ ಪಾಲು

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 8 :

 

ಜಮೀನಿಗೆ ನೀರು ಹಾಯಿಸಲು ಕ್ರೂಡಿಸಿದ ನೀರಿನ ಪಂಪಸೆಟ್ ಹಳ್ಳದಲ್ಲಿ ಮುಳುಗಿದೆಯೋ ಇಲ್ಲವೋ ಎಂದು ನೋಡಲು ಹೋಗಿ ಯುವಕನೊರ್ವ ನೀರು ಪಾಲಾದ ಘಟನೆ ಶುಕ್ರವಾರದಂದು ರಾತ್ರಿ ತಾಲೂಕಿನ ಡುಮ್ಮ ಉರಬಿನಟ್ಟಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಡುಮ್ಮ ಉರಬಿನಟ್ಟಿ ಗ್ರಾಮದ ನಾಗರಾಜ ಬಸನಪ್ಪ ಹೆಬ್ಬಳ್ಳಿ ಎಂಬ 18 ವರ್ಷದ ಯುವಕ ಗ್ರಾಮದ ಸಮೀಪವಿರುವ ಬಳ್ಳಾರಿ ನಾಲಾದಲ್ಲಿ ತಮ್ಮ ಜಮೀನಿಗೆ ನೀರು ಹಾಯಿಸಲು ಕ್ರೂಡಿಸಿದ ನೀರಿನ ಪಂಪಸೆಟ್ ಮುಳುಗಿದೆಯೋ ಇಲ್ಲವೋ ಎಂದು ನೋಡಲು ಹೋಗಿದ್ದ ಯುವಕ ಆಕಸ್ಮೀಕವಾಗಿ ಕಾಲು ಜಾರಿ ನೀರು ಪಾಲಾಗಿದ್ದಾನೆ.
ಯುವಕನ ಪತ್ತೆಗಾಗಿ ಎಸ್‍ಡಿಆರ್‍ಎಫ್ ತಂಡ, ಆಗ್ನಿ ಶಾಮಕ ಹಾಗೂ ಪೊಲೀಸ್‍ರ ತಂಡ ಶನಿವಾರ ಮುಂಜಾನೆಯಿಂದ ತ್ರೀವೃ ಶೋಧವನ್ನು ನಡೆಸುತ್ತಿದ್ದಾರೆ. ಸಂಜೆ ವೇಳೆಗೆ ಕತ್ತಲಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ರವಿವಾರ ಕೂಡಾ ಯುವಕನ ಹುಡುಕಾಟ ಮುಂದುವರೆಯಲಿದೆ ಎಂದು ಪೊಲೀಸ್ ಮೂಲಗಳು ಪತ್ರಿಕೆಗೆ ತಿಳಿಸಿವೆ.
ಈ ಕುರಿತು ಅಂಕಲಗಿ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ.

Related posts: