RNI NO. KARKAN/2006/27779|Thursday, October 16, 2025
You are here: Home » breaking news » ಘಟಪ್ರಭಾ:ಕೊರೋನಾ ಹಿನ್ನೆಲೆ : ಮಲ್ಲಾಪೂರ ಪಿ.ಜಿ ವ್ಯಾಪ್ತಿಯ ಸಾರ್ವಜನಿಕರಿಗಾಗಿ ಕೋವಿಡ-19 ಕಂಟ್ರೊಲ ರೂಂ ಸ್ಥಾಪನೆ

ಘಟಪ್ರಭಾ:ಕೊರೋನಾ ಹಿನ್ನೆಲೆ : ಮಲ್ಲಾಪೂರ ಪಿ.ಜಿ ವ್ಯಾಪ್ತಿಯ ಸಾರ್ವಜನಿಕರಿಗಾಗಿ ಕೋವಿಡ-19 ಕಂಟ್ರೊಲ ರೂಂ ಸ್ಥಾಪನೆ 

ಕೊರೋನಾ ಹಿನ್ನೆಲೆ : ಮಲ್ಲಾಪೂರ ಪಿ.ಜಿ ವ್ಯಾಪ್ತಿಯ ಸಾರ್ವಜನಿಕರಿಗಾಗಿ ಕೋವಿಡ-19 ಕಂಟ್ರೊಲ ರೂಂ ಸ್ಥಾಪನೆ

 

 

ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಜು 18 :

 

ಕೊರೊನಾ ವೈರಸಗೆ ಸಂಬಂಧಿಸಿದಂತೆ ಪಟ್ಟಣ ಪಂಚಾಯತ ಮಲ್ಲಾಪೂರ ಪಿ.ಜಿ ವ್ಯಾಪ್ತಿಯ ಸಾರ್ವಜನಿಕರಿಗಾಗಿ ಕೋವಿಡ-19 ಕಂಟ್ರೊಲ ರೂಂ ತೆರೆಯಲಾಗಿದ್ದು, ಸಾರ್ವಜನಿಕರು ದೂರವಾಣಿ ಮೂಲಕ ತಮ್ಮ ದೂರು ಮತ್ತು ಸಲಹೆಗಳನ್ನು ನೀಡಬಹುದು ಎಂದು ಪ.ಪಂ ಮುಖ್ಯಾಧಿಕಾರಿ ಕೆ.ಭೀ.ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಮಲ್ಲಾಪೂರ ಪಿ.ಜಿ ಪಟ್ಟಣದ ವ್ಯಾಪ್ತಿಯಲ್ಲಿ ಕೋವಿಡ-19 ಗೆ ಸಂಬಂಧಿಸಿದಂತೆ ಕೊರೊನಾ ವೈರಸ ಹರಡದಂತೆ ಮುಂಜಾಗ್ರತ ಕ್ರಮವಾಗಿ ಪಟ್ಟಣದಲ್ಲಿರುವ ಸಾರ್ವಜನಿಕರು ಯಾವುದೇ ತರಹ ಅಂಗಡಿಗಳ ಮುಂದೆ ಬ್ಯಾಂಕಗಳ ಮುಂದೆ ಧಾರ್ಮಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡದಿದ್ದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ ಧರಿಸದಿದ್ದಲ್ಲಿ ಮತ್ತು ಯಾರಾದರು  ವಿದೇಶಿಗಳಿಂದ ಮತ್ತು ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬಂದ ವ್ಯಕ್ತಿಗಳ ಚಲನ ವಲನಗಳ ಬಗ್ಗೆ ಮತ್ತು ಯಾವುದೇ ತರಹ ಕೋವಿಡಗೆ ಸಂಬಂಧಿಸಿದಂತ ದೂರುಗಳು ದಾಖಲಿಸುವುದಕ್ಕಾಗಿ  ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಯಲ್ಲಿ ಕೋವಿಡ-19 ಕಂಟ್ರೊಲ ರೂಂ ದಲ್ಲಿರುವ ದೂರವಾಣಿ ಸಂಖ್ಯೆ 08332-286076 ಮತ್ತು ಇಮೇಲ್ ಐ.ಡಿ  itstaffulbmallapurpg@yahoo.com ಗೆ  ಸಂಪರ್ಕಿಸಿ ಇದರ ಸದುಪಯೋಗ ಪಡೆದುಕೊಳ್ಳಲು ಸಾರ್ವಜನಿಕರಲ್ಲಿ ಈ ಮೂಲಕ ಕೋರಲಾಗಿದೆ.
 
 

Related posts: