RNI NO. KARKAN/2006/27779|Tuesday, November 4, 2025
You are here: Home » breaking news » ಮೂಡಲಗಿ:ಮೂಡಲಗಿ ತಾಲೂಕಿಗೆ ಪ್ರವೇಸಿದ ಕೊರೊನಾ : ಯಾದವಾಡ ಗ್ರಾಮದ ವ್ಯಕ್ತಿಗೆ ಸೋಂಕು ದೃಢ

ಮೂಡಲಗಿ:ಮೂಡಲಗಿ ತಾಲೂಕಿಗೆ ಪ್ರವೇಸಿದ ಕೊರೊನಾ : ಯಾದವಾಡ ಗ್ರಾಮದ ವ್ಯಕ್ತಿಗೆ ಸೋಂಕು ದೃಢ 

ಮೂಡಲಗಿ ತಾಲೂಕಿಗೆ ಪ್ರವೇಸಿದ ಕೊರೊನಾ : ಯಾದವಾಡ ಗ್ರಾಮದ ವ್ಯಕ್ತಿಗೆ ಸೋಂಕು ದೃಢ

 

 

ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಜು 12 :

 

ತಾಲೂಕಿನ ಯಾದವಾಡ ಗ್ರಾಮದಲ್ಲಿ ರವಿವಾರದಂದು 33 ವರ್ಷದ ಓರ್ವ ವ್ಯಕ್ತಿಗೆ ಕೊರೊನಾ ವೈರಸ್ ದೃಟಪಟ್ಟಿದರಿಂದ ತಾಲೂಕಿನ
ಜನತೆಯಲ್ಲಿ ಆತಂಕ ಮನೆ ಮಾಡಿದೆ.
ಯಾದವಾಡ ಗ್ರಾಮದಲ್ಲಿ ಹೊಟೇಲ ನಡೆಸುತ್ತಿದ ಓರ್ವ ವ್ಯಕ್ತಿ ಅನಾರೋಗ್ಯದಿಂದ ಬಾಗಲಕೋಟೆಯ ಆಸ್ಪತ್ರೆಯಲ್ಲಿ ದಾಖಾಲದ ಸಮಯದಲ್ಲಿ ಕೊರೊನಾ ವೈರಸ್ ದೃಡಪಟ್ಟಿದೆ.
ಗ್ರಾಮದಲ್ಲಿ ಕೊರೊನಾ ದೃಡಪಟ್ಟಿದರಿಂದ ಗ್ರಾಮದಲ್ಲಿ ಮುನೇಚ್ಚರಿಕೆ ಕ್ರಮವಾಗಿ ಸ್ಯಾನಿಟೈಜರ್ ಸಿಂಪರೆ ನಡೆಸಿ ಕರೊನಾ ದೃಡಪಟ್ಟ ಏರಿಯಾದಲ್ಲಿ 50ಮೀಟರ ಸುತ್ತಳತೆ ಸಿಲಡೌನ್ ಮಾಡಲಾಗಿದು, ದೃಡಪಟ್ಟ ವ್ಯಕ್ತಿಯ
ಮನೆಯ ಐವರನ್ನು ಕ್ವಾರೆಂಟೇನ್ ಮಾಡಲಾಗಿದೆ.
ಮುಂಜಾಗೃತ ಕ್ರಮವಾಗಿ ಗ್ರಾ.ಪಂ, ಆರೋಗ್ಯ ಮತ್ತು ಪೋಲಿಸ್ಇಲಾಖೆ, ಆಶಾಕಾರ್ಯಕರ್ತರು, ಮುಖಂಡರ ಸಭೆ ಸೇರಿ ಮುನೇಚರಿಕ್ಕೆ ಕ್ರಮಗಳ ಬಗ್ಗೆ ಚರ್ಚಿಸಿದರು.

ಈ ಸಮಯದಲ್ಲಿ ಗ್ರಾ.ಪಂ ಅಧ್ಯಕ್ಷ ಯಲ್ಲಪ್ಪಗೌಡ ನ್ಯಾಮಗೌಡ್ರ, ಆರೋಗ್ಯ ಸಹಾಯಕ ಎಸ್.ಪಿ.ಕೌಜಲಗಿ, ಎಸ್.ಐ.ಜಂಬಗಿ, ಶ್ರೀಶೈಲ್ ಚೌಡಾಪೂರ,
ಕಲ್ಮೇಶ ಗಾಣಿಗೇರ, ಪೊಲೀಸ್ ಇಲಾಖೆಯ ಕೃಷ್ಣಾ ಲಂಕೆನ್ನವರ, ಗ್ರಾ.ಪಂ ಸದಸ್ಯರು, ಸಿಬ್ಬಂದಿ ವರ್ಗದವರು, ಕರವೇ ಕಾರ್ಯಕರ್ತರು, ಮುಖಂಡರು ಇದ್ದರು.

Related posts: