RNI NO. KARKAN/2006/27779|Thursday, January 15, 2026
You are here: Home » breaking news » ಗೋಕಾಕ:ಗೋಕಾಕ್ ತಹಶೀಲ್ದಾರ ಕಚೇರಿಗೆ ಎಮ್ಮೆ-ಎತ್ತು ನುಗ್ಗಿಸಿ ನೆರೆ ಸಂತ್ರಸ್ತ ರೈತರ ಆಕ್ರೋಶ

ಗೋಕಾಕ:ಗೋಕಾಕ್ ತಹಶೀಲ್ದಾರ ಕಚೇರಿಗೆ ಎಮ್ಮೆ-ಎತ್ತು ನುಗ್ಗಿಸಿ ನೆರೆ ಸಂತ್ರಸ್ತ ರೈತರ ಆಕ್ರೋಶ 

ಗೋಕಾಕ್ ತಹಶೀಲ್ದಾರ ಕಚೇರಿಗೆ ಎಮ್ಮೆ-ಎತ್ತು ನುಗ್ಗಿಸಿ ನೆರೆ ಸಂತ್ರಸ್ತ ರೈತರ ಆಕ್ರೋಶ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 16 : 

 
ಒಂದು ವರ್ಷ ಕಳೆಯುತ್ತಾ ಬಂದರೂ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ದೊರೆತ್ತಿಲ್ಲಾ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ತಹಶೀಲ್ದಾರ್ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು .

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಕ್ಷೇತ್ರದಲ್ಲಿ ಪರಿಹಾರಕ್ಕೆ ಆಗ್ರಹಿಸಿ ನೆರೆ ಸಂತ್ರಸ್ತರು ಬೀದಿಗಿಳಿದು ತಹಶೀಲ್ದಾರ ಕಚೇರಿ ಆವರಣದಲ್ಲಿ ದನ-ಕರು, ಎಮ್ಮೆ-ಎತ್ತುಗಳೊಂದಿಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಮುಂಜಾನೆ ಗೋಕಾಕ ತಹಶೀಲ್ದಾರರ ಕಚೇರಿಗೆ ನೆರೆ ಸಂತ್ರಸ್ತರು ಮುತ್ತಿಗೆ ಹಾಕಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಘೋಷಣೆ ಹಾಕಿದ ನೂರಾರು ರೈತ ನೆರೆ ಸಂತ್ರಸ್ತರು ದನ, ಎತ್ತು, ‌ಕರುಗಳೊಂದಿಗೆ ಗೋಕಾಕ್ ತಹಶೀಲ್ದಾರ್ ಕಚೇರಿ‌ ಒಳಗೆ ಹೋಗಲು ಯತ್ನಿಸಿದರು. ಬೊಬ್ಬೆ ಹೊಡೆದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪುಟ್ಟ ಪುಟ್ಟ ಮಕ್ಕಳನ್ನು ಕರೆದುಕೊಂಡು ಬಂದು ನೆರೆ ಸಂತ್ರಸ್ತರು ಪ್ರತಿಭಟನೆ ನಡೆಸಿದರು. ನಂತರ ಮಧ್ಯಾಹ್ನ ಅಲ್ಲಿಯೇ ಒಲೆ ಹೊತ್ತಿಸಿ ಅಡುಗೆ ತಯಾರಿಸಿ ಊಟ ಮಾಡಿದರು.

Related posts: