RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ದಲಿತ ಯುವಕನ ಕೊಲೆ ಖಂಡಿಸಿ ಮಾದಿಗ ಮಿಸಲಾತಿ ಹೋರಾಟ ಸಮಿತಿ ವತಿಯಿಂದ ಮೌನ ಮೆರವಣಿಗೆ ನಡೆಸಿ ಮನವಿ

ಗೋಕಾಕ:ದಲಿತ ಯುವಕನ ಕೊಲೆ ಖಂಡಿಸಿ ಮಾದಿಗ ಮಿಸಲಾತಿ ಹೋರಾಟ ಸಮಿತಿ ವತಿಯಿಂದ ಮೌನ ಮೆರವಣಿಗೆ ನಡೆಸಿ ಮನವಿ 

ದಲಿತ ಯುವಕನ ಕೊಲೆ ಖಂಡಿಸಿ ಮಾದಿಗ ಮಿಸಲಾತಿ ಹೋರಾಟ ಸಮಿತಿ ವತಿಯಿಂದ ಮೌನ ಮೆರವಣಿಗೆ ನಡೆಸಿ ಮನವಿ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೇ 8 :

 

 

 
ಬುಧವಾರ ರಾತ್ರಿ ನಗರದ ಆದಿ ಜಾಬಂವ ನಗರದಲ್ಲಿ ನಡೆದ ದಲಿತ ಯುವಕನ ಹತ್ಯೆ ಖಂಡಿಸಿ ಗೋಕಾಕ ತಾಲೂಕಾ ಮಾದಿಗ ಮಿಸಲಾತಿ ಹೋರಾಟ ಸಮಿತಿ ಪದಾಧಿಕಾರಿಗಳು ನಗರದಲ್ಲಿ ಮೌನ ಮೆರವಣಿಗೆ ನಡೆಯಿಸಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಅವರಿಗೆ ಮನವಿ ಅರ್ಪಿಸಿದರು

ಶುಕ್ರವಾರದಂದು ನಗರದ ಬಸವೇಶ್ವರ ವೃತ್ರದಲ್ಲಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಶಹರ ಪೊಲೀಸ ಠಾಣೆಯ ವರೆಗೆ ಮೌನ ಮೆರವಣಿಗೆ ನಡೆಯಿಸಿ ಪ್ರಕರಣದ ತನಿಖೆಗೆ ಬಂದಿದ್ದ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರಿಗೆ ಮನವಿ ಅರ್ಪಿಸಿದರು

ದಿ.6 ಬುಧವಾರದಂದು ಗೋಕಾಕ ನಗರದ ಮಾದಿಗ ಸಮಾಜದ ದಲಿತ ಯುವ ವೇದಿಕೆ ಅಧ್ಯಕ್ಷ ಸಿದ್ದು ಕಣಮಡಿ ಇತನನ್ನು ಮಾರಕಾಸ್ತ್ರಗಳಿಂದ ಕೋಚ್ಚಿ ಕೊಲೆ ಮಾಡಿದ್ದು, ಕೊಲೆ ಹಿಂದೆ ದಲಿತ ವಿರೋಧಿ ಅಂಗ ಸಂಸ್ಥೆಗಳಾದ ಆರ್.ಎಸ್.ಎಸ್‌, ಭಜರಂಗದಳ , ರಾಮಸೇನೆ ಸಂಘಟನೆಗಳ ಕೈವಾಡವಿದೆ ಎಂದು ಸಂಶಯ ವ್ಯಕ್ತವಾಗಿದೆ . ಕೊಲೆ ಗಡುಕರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಆರೋಪಿಗಳ ಮೇಲೆ ಕ್ರಮ ಕೈಗೋಳ್ಳಲು ಅಧಿಕಾರಿಗಳು ಹಿಂದೆಟು ಹಾಕಿದರೆ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗುವದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಮನವಿ ಸ್ವೀಕರಿಸಿ ಮಾತನಾಡಿದ ಪೊಲೀಸ ವರಿಷ್ಠಾಧಿಕಾರಿ ನಿಂಬರಗಿ ಅವರು ಈಗಾಗಲೇ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅಪರಾಧಿಗಳು ಯಾರೆ ಆಗಲಿ ಅವರ ಬಂಧನಕ್ಕೆ ರಾಮದುರ್ಗ ಡಿ.ವಾಯ್.ಎಸ್.ಪಿ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಕಾನೂನು ರೀತ್ಯ ಕಠಿಣ ಶಿಕ್ಷಗೆ ಒಳಪಡಿಸಲಾಗುವದು ಎಂದು ಹೇಳಿದರು

ಪ್ರತಿಭಟನೆಯಲ್ಲಿ ರಮೇಶ ಮಾದರ , ಸತ್ಯಜಿತ್ ತರವಾಡೆ, ಲಕ್ಷ್ಮಣ ತಳಗಡೆ, ಬಬಲೆಪ್ಪಾ ಮಾದರ, ಬಾಳೇಶ ಸಂತವ್ವಗೋಳ, ಕಾಡಪ್ಪ ಮೇಸ್ತ್ರಿ ಸೇರಿದಂತೆ ಅನೇಕರು ಇದ್ದರು

Related posts: