RNI NO. KARKAN/2006/27779|Wednesday, January 14, 2026
You are here: Home » breaking news » ಗೋಕಾಕ:ಸರ್ಕಾರಿ ಗಂಡು ಮಕ್ಕಳ ಶಾಲೆ ನಂ.3 ಶಾಲೆಯ ಹಳೆಯ ವಿದ್ಯಾರ್ಥಿಗಳ ಗೆಳೆಯರ ಬಳಗದ ವತಿಯಿಂದ ಉಪಹಾರ ವಿತರಣೆ

ಗೋಕಾಕ:ಸರ್ಕಾರಿ ಗಂಡು ಮಕ್ಕಳ ಶಾಲೆ ನಂ.3 ಶಾಲೆಯ ಹಳೆಯ ವಿದ್ಯಾರ್ಥಿಗಳ ಗೆಳೆಯರ ಬಳಗದ ವತಿಯಿಂದ ಉಪಹಾರ ವಿತರಣೆ 

ಸರ್ಕಾರಿ ಗಂಡು ಮಕ್ಕಳ ಶಾಲೆ ನಂ.3 ಶಾಲೆಯ ಹಳೆಯ ವಿದ್ಯಾರ್ಥಿಗಳ ಗೆಳೆಯರ ಬಳಗದ ವತಿಯಿಂದ ಉಪಹಾರ ವಿತರಣೆ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 3 :

 

 

ಕೊರೋನಾ ವೈರಸ್ ಭೀತಿಯಿಂದ ದೇಶದಾದ್ಯಂತ ಲಾಕ್‍ಡೌನ್ ಘೋಷಿಸಿದ ಹಿನ್ನಲೆಯಲ್ಲಿ ಕಳೆದ 8ದಿನಗಳಿಂದ ಇಲ್ಲಿಯ ಸರ್ಕಾರಿ ಗಂಡು ಮಕ್ಕಳ ಶಾಲೆ ನಂ.3 (ಕೆ.ಬಿ.ಎಸ್.ನಂ.3) ಶಾಲೆಯ ಹಳೆಯ ವಿದ್ಯಾರ್ಥಿಗಳ ಗೆಳೆಯರ ಬಳಗದ ವತಿಯಿಂದ ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯವನ್ನು ನಿರ್ವಹಿಸುತ್ತಿರುವ ಪೋಲೀಸ ಸಿಬ್ಬಂದಿಗೆ, ಪೌರ ಕಾರ್ಮಿಕರಿಗೆ, ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಗೂ ಅಸಹಾಯಕರಿಗೆ ಊಟ, ಉಪಹಾರ, ಮಜ್ಜಿಗೆ ಹಾಗೂ ಶುದ್ಧ ಕುಡಿಯುವ ನೀರು ಸೇರಿದಂತೆ ವಸ್ತುಗಳನ್ನು ಪೂರೈಸುವ ಕಾರ್ಯದಲ್ಲಿ ಅವಿರತವಾಗಿ ಶ್ರಮಿಸುತ್ತಿದೆ.
ಪ್ರತಿದಿನ ಅಗತ್ಯ ವಸ್ತುಗಳನ್ನು ಸಂಗ್ರಹಿಸಿಕೊಂಡು ಅದರಲ್ಲಿ ಉಪಹಾರ-ಊಟವನ್ನು ತಯಾರಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಸ್ಥಳಗಳಿಗೆ ಹೋಗಿ ಅವರಿಗೆ ವಿತರಿಸುತ್ತಿದ್ದಾರೆ. ಶುಕ್ರವಾರದಂದು ಕೂಡಾ ನಗರದ ವಿವಿದೆಡೆ ಸಂಚರಿಸಿ ತಮ್ಮ ಕಾಯಕವನ್ನು ಮುಂದುವರೆಸಿದ್ದಾರೆ.
ಕೆಬಿಎಸ್ ನಂ.3 ಶಾಲೆಯ ಹಳೆಯ ವಿದ್ಯಾರ್ಥಿಗಳ ಗೆಳೆಯರ ಬಳಗದಲ್ಲಿ ಸಂತೋಷ ಖಂಡ್ರಿ, ಶಂಕರ ಧರೆನ್ನವರ, ಸತೀಶ ಬನ್ನಿಶೆಟ್ಟಿ, ಲಕ್ಷ್ಮಣ ತಾಶೀಲದಾರ, ಮಸ್ತಾನ ಬಾಗವಾನ, ಶಮಶುದ್ದೀನ್ ಪರೀಟ, ಸಿದ್ದಪ್ಪ ನಾಂವಿ, ಮಂಜುನಾಥ ಗಂಜಿ, ಶಿವಪುತ್ರ ಶಿಂಗಳಾಪೂರ, ಮಾಯಪ್ಪ ತುಳಜನ್ನವರ, ಮಲ್ಲಪ್ಪ ದಾಸಪ್ಪಗೋಳ ಸೇರಿದಂತೆ ಗೆಳೆಯರು ಸೇರಿ ಊಟ-ಉಪಹಾರವನ್ನು ನೀಡುತ್ತಿದ್ದಾರೆ.

Related posts: