ಬೆಟಗೇರಿ : ಅಂಗಡಿ ಮುಂಗಟ್ಟುಗಳ ಮುಂದೆ ಮೂರ್ನಾಲ್ಕು ಜನರು ಗುಂಪಾಗಿ ಕೂಡ್ರುವುದು, ತಿರುಗಾಡುವದನ್ನು ನಿಷೇದಿಸಲಾಗಿದೆ : ಹನಮಂತ ನರಳೆ

ಅಂಗಡಿ ಮುಂಗಟ್ಟುಗಳ ಮುಂದೆ ಮೂರ್ನಾಲ್ಕು ಜನರು ಗುಂಪಾಗಿ ಕೂಡ್ರುವುದು, ತಿರುಗಾಡುವದನ್ನು ನಿಷೇದಿಸಲಾಗಿದೆ : ಹನಮಂತ ನರಳೆ
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಮಾ 26 :
ಗ್ರಾಮದಲ್ಲಿ ಕಲಂ 144 ಜಾರಿಯಲ್ಲಿರುವುದರಿಂದ ಸ್ಥಳೀಯ ಪ್ರಮುಖ ಸ್ಥಳ, ಅಂಗಡಿ ಮುಂಗಟ್ಟುಗಳ ಮುಂದೆ ಮೂರ್ನಾಲ್ಕು ಜನರು ಗುಂಪಾಗಿ ಕೂಡ್ರುವುದು, ತಿರುಗಾಡುವದನ್ನು ನಿಷೇದಿಸಲಾಗಿದೆ ಎಂದು ಕುಲಗೋಡ ಪೊಲೀಸ್ ಠಾಣೆಯ ಪಿಎಸ್‍ಐ ಹನಮಂತ ನರಳೆ ಖಡಕ್ ಸೂಚನೆ ನೀಡಿದರು.
ಕರೋನಾ ವೈರಸ್ ಹರಡುವ ಭೀತಿ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಅವರ ಆದೇಶದ ಮೇರೆಗೆ ಕುಲಗೋಡ ಪೊಲೀಸ್ ಠಾಣೆಯ ವ್ಯಾಪ್ತಿಯ ಬೆಟಗೇರಿ ಗ್ರಾಮಕ್ಕೆ ಮಂಗಳವಾರ ಮತ್ತು ಗುರುವಾರ ರಂದು ಭೇಟಿ ನೀಡಿದ ಅವರು ಬೆಟಗೇರಿ ಗ್ರಾಮ ಅಷ್ಟೇ ಅಲ್ಲದೇ ಕುಲಗೋಡ ಪೊಲೀಸ್ ಠಾಣೆಯ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿ ಆದೇಶ ಪಾಲನೆ ಮಾಡದ ವ್ಯಕ್ತಿಗಳ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹೊರ ಜಿಲ್ಲೆ, ತಾಲೂಕು, ಬೇರೆ ಕಡೆಯಿಂದ ಬೆಟಗೇರಿ ಗ್ರಾಮಕ್ಕೆ ಈಗ ಬಂದ ನಾಗರಿಕರಿಗೆ ಸುರಕ್ಷೀತ ಕ್ರಮವಾಗಿ ಹಲವು ದಿನಗಳ ಕಾಲ ಮನೆಯಿಂದ ಹೊರಬರದಂತೆ ಮುನ್ನಚ್ಚರಿಕೆಗಳನ್ನು ಅನುಸರಿಸುವಂತೆ ತಿಳಿಸಿದರು.
ಜಗತ್ತಿನಾಧ್ಯಂತ ಕರೋನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕರೋನಾ ಮಹಾಮಾರಿಯನ್ನು ಮಟ್ಟಹಾಕುವ ನಿಟ್ಟಿನಲ್ಲಿ ಗ್ರಾಮೀಣ ವಲಯದ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಮುಖಕ್ಕೆ ತಪ್ಪದೇ ಮಾಸ್ಕ್ ಧರಿಸಬೇಕು. ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಎಲ್ಲರೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಇಲ್ಲಿಯ ಸಂಜೀವಿನಿ ಆಸ್ಪತ್ರೆ ವೈದ್ಯ ಡಾ.ಸಂಜೀವ ಹಂಜಿ ಹೇಳಿದ್ದಾರೆ.
ಕುಲಗೋಡ ಪೊಲೀಸ್ ಠಾಣೆಯ ಪೋಲೀಸ್ ಪೇದೆ ಎಲ್.ಎಮ್.ನಾಯ್ಕ, ಪೋಲೀಸ್ ಪೇದೆಗಳು, ಗ್ರಾಪಂ ಸಿಬ್ಬಂದಿ, ಮತ್ತೀತರರು ಇದ್ದರು.