ಗೋಕಾಕ:ನಾಳೆ ಆರ್.ಎಮ್.ಎಸ್.ಎ.ಆದರ್ಶ ವಿದ್ಯಾಲಯ ಖನಗಾಂವ ಶಾಲೆಯ 6 ನೇ ತರಗತಿ ಪ್ರವೇಶ ಪರೀಕ್ಷೆ : ಬಿಇಒ ಬಳಗಾರ ಮಾಹಿತಿ
ನಾಳೆ ಆರ್.ಎಮ್.ಎಸ್.ಎ.ಆದರ್ಶ ವಿದ್ಯಾಲಯ ಖನಗಾಂವ ಶಾಲೆಯ 6 ನೇ ತರಗತಿ ಪ್ರವೇಶ ಪರೀಕ್ಷೆ : ಬಿಇಒ ಬಳಗಾರ ಮಾಹಿತಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 14 :
ಗೋಕಾಕ ಶೈಕ್ಷಣಿಕ ವಲಯದ ಆರ್.ಎಮ್.ಎಸ್.ಎ. ಆದರ್ಶ ವಿದ್ಯಾಲಯ ಖನಗಾಂವ ಶಾಲೆಯ 6 ನೇ ತರಗತಿ ಪ್ರವೇಶ ಪರೀಕ್ಷೆ ನಾಳೆ ರವಿವಾರ ದಿನಾಂಕ 15 ರಂದು ನಿಗದಿತ ವೇಳಾಪಟ್ಟಿಯಂತೆ ನಡೆಯಲಿವೆ ಎಂದು ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ತಿಳಿಸಿದ್ದಾರೆ
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಆರ್.ಎಮ್.ಎಸ್.ಎ. ಆದರ್ಶ ವಿದ್ಯಾಲಯ ಖನಗಾಂವ ಶಾಲೆಯ 6 ನೇ ತರಗತಿ ಪ್ರವೇಶ ಪರೀಕ್ಷೆಗೆ ಒಟ್ಟು 6 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ .ಗೋಕಾಕ ನಗರದ ಸರಕಾರಿ ಪದವಿ ಪೂರ್ವ ಕಾಲೇಜು , ಮಯೂರ ಪ್ರೌಢಶಾಲೆ, ಜಿ.ಇ.ಎಸ್ ಪ್ರೌಢಶಾಲೆ, ನ್ಯೂ ಇಂಗ್ಲಿಷ್ ಸ್ಕೂಲ್ , ಎಲ್ ಆರ್ ಜೆ ಪ್ರೌಢಶಾಲೆ ಮತ್ತು ಎನ್ ಎಸ್ ಎಫ್ ಗೋಕಾಕ ದಲ್ಲಿ ಪರೀಕ್ಷೆಗಳು ನಡೆಯಲಿದ್ದು, ಒಟ್ಟು 1890 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ . ಈಗಾಗಲೇ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿದ್ದತೆ ಪೂರ್ಣ ಗೊಂಡಿದ್ದು, ಕೊಠಡಿ ವ್ಯವಸ್ಥೆ, ಮೇಲ್ವೀಚಾರಕರ ಸಭೆ.. ಸೂಕ್ತ ಪೋಲೀಸ್ ಬಂದೋಬಸ್ತ್ ಗೆ ಏರ್ಪಾಡು ಮಾಡಲಾಗಿದೆ . ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಅಚ್ಚುಕಟ್ಟಾಗಿ ಪರೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ. ಉಸ್ತುವಾರಿ ನಡೆಸಲು ಡಿ.ಡಿ.ಪಿ.ಐ ಗಜಾನನ ಮನ್ನಿಕೇರಿ ಮತ್ತು ಡಯಟ್ ಪ್ರಾಚಾರ್ಯರು ಮೋಹನ್ ಜಿರಿಗ್ಯಾಳ ಅವರ ನಿರ್ದೇಶನದಂತೆ ನ್ಯೂಡಲ್ ಅಧಿಕಾರಿಗಳು ಕಾರ್ಯನಿರ್ವಹಣೆ ಮಾಡುವರು . ಪಾಲಕರು ಯಾವುದೇ ಊಹಾಪೋಹಗಳಿಗೆ ಕಿವಿ ಕೊಡಲಾರದೆ ಪರೀಕ್ಷೆ ಬರೆಯಲು ಮಕ್ಕಳಿಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಬಿಇಒ ಬಳಗಾರ ಪ್ರಕಟನೆಯಲ್ಲಿ ಕೋರಿದ್ದಾರೆ.