RNI NO. KARKAN/2006/27779|Wednesday, October 15, 2025
You are here: Home » breaking news » ಮೂಡಲಗಿ:ಸಾಧನೆ ಮಾಡಬೇಕೆನ್ನುವ ಆತ್ಮವಿಶ್ವಾಸವಿದ್ದರೆ ಯಶಸ್ಸು ಹುಡುಕಿಕೊಂಡು ಬರುತ್ತದೆ : ಬಾಲಶೇಖರ ಬಂದಿ

ಮೂಡಲಗಿ:ಸಾಧನೆ ಮಾಡಬೇಕೆನ್ನುವ ಆತ್ಮವಿಶ್ವಾಸವಿದ್ದರೆ ಯಶಸ್ಸು ಹುಡುಕಿಕೊಂಡು ಬರುತ್ತದೆ : ಬಾಲಶೇಖರ ಬಂದಿ 

ಸಾಧನೆ ಮಾಡಬೇಕೆನ್ನುವ ಆತ್ಮವಿಶ್ವಾಸವಿದ್ದರೆ ಯಶಸ್ಸು ಹುಡುಕಿಕೊಂಡು ಬರುತ್ತದೆ : ಬಾಲಶೇಖರ ಬಂದಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಡಿ 18 :

 

 

ಸಾಧನೆ ಮಾಡಬೇಕೆನ್ನುವ ಆತ್ಮವಿಶ್ವಾಸ, ಶ್ರದ್ಧೆ ಮತ್ತು ಪರಿಶ್ರವಿದ್ದರೆ ಯಶಸ್ಸು ಹುಡುಕಿಕೊಂಡು ಬರುತ್ತದೆ’ ಎಂದು ಕನ್ನಸ ಸಾಹಿತ್ಯ ಪರಿಷತ್ತ ನಿಕಟಪೂರ್ವ ಅಧ್ಯಕ್ಷ ಬಾಲಶೇಖರ ಬಂದಿ ಹೇಳಿದರು.
ಇಲ್ಲಿಯ ಕರುನಾಡು ಸೈನಿಕ ತರಬೇತಿ ಕೇಂದ್ರದಿಂದ ಭಾರತೀಯ ಸೇನೆಗೆ ಆಯ್ಕೆಯಾದ ಯುವಕರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಸೇನೆಗೆ ಸೇರುವದೆಂದರೆ ದೇಶ ಸೇವೆ ಮಾಡಲಿಕ್ಕೆ ಉತ್ತಮ ಅವಕಾಶ ದೊರೆತಂತೆ ಎಂದರು.
ಸಂಸ್ಥೆಯ ಸಂಚಾಲಕ ಶಂಕರ ತುಕ್ಕನ್ನವರ ಮಾತನಾಡಿ ಕರುನಾಡು ಕೇಂದ್ರದಿಂದ ಭಾರತೀಯ ಸೇನೆಗೆ 7 ಯುವಕರು ಅಯ್ಕೆಯಾಗಿದ್ದು ಹೆಮ್ಮೆಯಾಗಿದೆ. ಕೇವಲ ಎರಡು ವರ್ಷದಲ್ಲಿ ಉತ್ತಮ ಫಲಿತಾಂಶ ದೊರೆತಿದ್ದು, ಇನ್ನು ಸಾಧನೆ ಮಾಡುತ್ತೇವೆ ಎಂದರು.
ಭಾರತೀಯ ಸೇನೆಗೆ ಆಯ್ಕೆಯಾದ ಅಪ್ಪಯ್ಯ ಹಿರೇಮಠ, ಆಕಾಶ ಬಾಗಿಮನಿ, ನಾಗರಾಜ ಸಿ.ಪಿ, ಪ್ರವೀಣ ವಾಲೇಕಾರ, ನೌಶಾದ ಕಿಲ್ಲೇದಾರ, ಮಹೇಶ ಬಿಡಗನೂರ ಅವರನ್ನು ಸನ್ಮಾನಿಸಿ ಗೌರವಿಸಿದರು.
ಆಸ್ಕರ್ ಇನಾಮದಾರ, ಅಲ್ಲಪ್ಪ ಕಿತ್ತೂರ, ಚಂದ್ರಶೇಖರ ಕಾಜಗಾರ ವೇದಿಕೆಯಲ್ಲಿದ್ದರು.
ಹೀನಾ ಪಟೇಲ್ ಸ್ವಾಗತಿಸಿದರು, ವಿನೋದ ಕೋರೆ ನಿರೂಪಿಸಿದರು, ಬಸವರಾಜ ತಹಶೀಲ್ದಾರ್ ವಂದಿಸಿದರು.

Related posts: