RNI NO. KARKAN/2006/27779|Monday, August 4, 2025
You are here: Home » breaking news » ಗೋಕಾಕ:ರಮೇಶ್ ಜಾರಕಿಹೊಳಿ ಅವರ ಬ್ಲ್ಯಾಕ್ ಮೇಲ್ ತಂತ್ರಗಾರಿಕೆ ಇನ್ನೂ ಮುಂದುವರಿದಿದೆ : ಶಾಸಕ ಸತೀಶ ವ್ಯಂಗ್ಯ

ಗೋಕಾಕ:ರಮೇಶ್ ಜಾರಕಿಹೊಳಿ ಅವರ ಬ್ಲ್ಯಾಕ್ ಮೇಲ್ ತಂತ್ರಗಾರಿಕೆ ಇನ್ನೂ ಮುಂದುವರಿದಿದೆ : ಶಾಸಕ ಸತೀಶ ವ್ಯಂಗ್ಯ 

ರಮೇಶ್ ಜಾರಕಿಹೊಳಿ ಅವರ ಬ್ಲ್ಯಾಕ್ ಮೇಲ್ ತಂತ್ರಗಾರಿಕೆ ಇನ್ನೂ ಮುಂದುವರಿದಿದೆ : ಶಾಸಕ ಸತೀಶ ವ್ಯಂಗ್ಯ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 15 :

 

ರಮೇಶ್ ಜಾರಕಿಹೊಳಿ ಅವರ ಬ್ಲ್ಯಾಕ್ ಮೇಲ್ ತಂತ್ರಗಾರಿಕೆ ಇನ್ನೂ ಮುಂದುವರಿದಿದೆ ಎಂದು ಯಮಕನಮರಡಿ ಶಾಸಕ, ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ರಮೇಶ್ ಜಾರಕಿಹೊಳಿ ವಿರುದ್ಧ ಹರಿಹಾಯ್ದರು.
ಅವರು ನಗರದ ಲಖನ್ ಜಾರಕಿಹೊಳಿ ಅವರ ಕಚೇರಿಯ ಮುಂಭಾಗದಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಿಜೆಪಿಯಲ್ಲಿ ಡಿಸಿಎಂ ಮತ್ತು ಸಚಿವ ಸ್ಥಾನಕ್ಕೆ ಈಗಾಗಲೇ ಬೆಂಗಳೂರಿನಲ್ಲಿ ಲಾಬಿ ನಡೆದಿದ್ದು, ರಮೇಶ್ ಅವರು ಸಿದ್ಧರಾಮಯ್ಯ ಅವರ ಜೊತೆ ದೋಸ್ತಿ ಇದೆ ಅಂತಾ ಅವರನ್ನು ಭೇಟಿ ಮಾಡಿ ಬ್ಲಾಕ್‍ಮೇಲ್ ಮಾಡುತ್ತಿದ್ದಾರೆ. ಅಲ್ಲದೇ ರಮೇಶ್ ಈಗ ಕುಮಾರಸ್ವಾಮಿಯನ್ನು ಭೇಟಿಯಾಗುತ್ತಾನೆ. ಮಂತ್ರಿಯಾದ ಮೇಲೆ ಸದನದಲ್ಲಿ ಅಟ್ಯಾಕ್ ಮಾಡಬಾರದೆಂದು ಎಲ್ಲರನ್ನೂ ಭೇಟಿ ಮಾಡುತ್ತಾನೆ. ಬಿಜೆಪಿಯಲ್ಲೂ ಬಿ.ಎಸ್.ಯಡಿಯೂರಪ್ಪರನ್ನು ಬ್ಲ್ಯಾಕ್ ಮೇಲ್ ಮಾಡುತ್ತಾನೆ. ಯಡಿಯೂರಪ್ಪ ಇವನನ್ನು ಹೊರ ಹಾಕುತ್ತಾರೋ ಅವರನ್ನು ಈತ ಹೊರ ಹಾಕುತ್ತಾನೋ ಕಾದು ನೊಡಬೇಕು ಎಂದು ವ್ಯಂಗವಾಡಿದರು.
ಬುದ್ಧ,ಬಸವಣ್ಣ, ಅಂಬೇಡ್ಕರ ಅವರನ್ನು ಓಡಿಸಿದ ದೇಶ ನಮ್ಮದು, ಮೋಸ-ಸುಳ್ಳುತನ ವಂಚನೆ ಮಾಡುವವರಿಗೆ ಮಣೆ ಹಾಕುವುದು ಇಲ್ಲಿನ ಮಣ್ಣಿನ ಗುಣಧರ್ಮವಾಗಿದೆ. ಆದರೂ ಕೂಡಾ ಬುದ್ಧ,ಬಸವಣ್ಣ, ಅಂಬೇಡ್ಕರ ಪರವಾಗಿದ್ದವರು ನಮಗೆ ಮತ ಹಾಕಿದ್ದಾರೆ. ಬಸವಣ್ಣ ಮತ್ತು ಬುದ್ಧರನ್ನು ದೇಶ ಬಿಟ್ಟು ಓಡಿಸಿದಂತವರು ರಮೇಶ್ ಮತ ಹಾಕಿದ್ದಾರೆ. ನಿರ್ಲಕ್ಷ್ಯ ಶಾಸಕನನ್ನು ಸೋಲಿಸುವುದೇ ನಮ್ಮ ಗುರಿಯಾಗಿತ್ತು ಆದರೆ ಅದು ಸಾಧ್ಯವಾಗಿಲ್ಲ ಎಂದರು.
ನಾವು ಕಠಿಣ ಪರಿಸ್ಥಿತಿಯಲ್ಲೂ 59ಸಾವಿರ ಮತಗಳನ್ನು ಪಡೆದುಕೊಂಡು ಸೋಲಿರಬಹುದು ಆದರೆ ಇದು ನಮಗೆ ದೊಡ್ಡ ಸಾಧನೆಯಾಗಿದೆ. ಎಂಎಲ್‍ಎ ಸ್ಥಾನವನ್ನು ವ್ಯಾಪಾರೀಕರಣವಾಗಿ ಉಪಯೋಗಿಸುತ್ತಿದ್ದಾರೆ. ರಮೇಶ್ ಅವರು ಮೋಸ, ದುಡ್ಡು ಮಾಡಲಿಕ್ಕೆ ರಾಜಕೀಯಕ್ಕೆ ಬಂದಿದ್ದಾರೆ. ಜಿಲ್ಲೆ ಮತ್ತು ಕ್ಷೇತ್ರದ ಅಭಿವೃದ್ಧಿ ಮಾಡಲಿಕ್ಕೆ ಅಲ್ಲ. ಇರುವ ಒಂದು ಡ್ರಿಗಿ ಕಾಲೇಜಿಗೆ ಸ್ವಂತ ಕಟ್ಟಡವಿಲ್ಲ ಇದು ಕ್ಷೇತ್ರದ ದ್ರೌಭಾಗ್ಯ. ಸಿಎಂ ಯಡಿಯೂರಪ್ಪ ಅವರು ಹಾಗೂ ಬಾಲಚಂದ್ರ ಜಾರಕಿಹೊಳಿ ಅವರ ಪೋರ್ಸ್ ಗೋಕಾಕ ಮತಕ್ಷೇತ್ರಕ್ಕೆ ಬರದೇ ಇದ್ದರೇ ರಮೇಶ್‍ಗೆ ಮೂರನೇ ಸ್ಥಾನದಲ್ಲಿರುತ್ತಿದ್ದರು. ಸೋಲುತ್ತೇವೆ ಎನ್ನುವ ಬೀತಿಯಲ್ಲಿಯೇ ಚುನಾವಣೆ 2-3 ದಿನಗಳು ಇರುವಾಗಲೇ ಲಕ್ಷ ಗಟ್ಟಲೇ ಹಣವನ್ನು ರಮೇಶ್‍ನ ಅಳಿಯ ಅಂಬಿರಾವ್ ಹಂಚಿ, ಹೆದರಿಸಿ ನಮ್ಮ ಗೆಲುವನ್ನು ಕಸಿದುಕೊಂಡಿದ್ದಾರೆಂದು ಆರೋಪಿಸಿದರು.
ರಮೇಶ್ ಜಾರಕಿಹೊಳಿ ಅವರು ಬಿಜೆಪಿಗೆ ಸೇರಿದ್ದು ಡಿಸಿಎಂ ಮತ್ತು ನೀರಾವರಿ ಮಂತ್ರಿಯಾಗಬೇಕೆಂದು ಆದರೆ ಅವರು ಬಿಜೆಪಿಯಲ್ಲಿ ಬ್ಲ್ಯಾಕ್ ಮೇಲ್ ಮಾಡುವುದು ಶತಸಿದ್ಧ. ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಭೀಮಶಿ ಜಾರಕಿಹೊಳಿ ಅವರು ನಮ್ಮ ಮತದಾರರಿಗೆ ಬೇರೆ ಬೇರೆ ತಂತ್ರಗಳಿಂದ ಹೆದರಿಸಿ ಮತಗಳನ್ನು ಹಾಕಿಸಿಕೊಂಡಿದ್ದಾರೆ. ಮುಂಬರುವ ಸಾರ್ವತ್ರಿಕ ಚುನಾವಣೆಗೆ ರಮೇಶ್‍ಗೆ ಯಡಿಯೂರಪ್ಪ ಮತ್ತು ಬಾಲಚಂದ್ರ ಸೇರಿದಂತೆ ಯಾರದೂ ರಕ್ಷಣೆ ಇರುವುದಿಲ್ಲ. ಆದ್ದರಿಂದ ಲಖನ್ ಅವರು ತಮ್ಮ ಪಕ್ಷ ಸಂಘಟನೆ ಮಾಡುವುದು ಮುಖ್ಯವಾಗಿದೆ. ನಾವು ಜನರ ಸೇವೆ ಮತ್ತು ಸಂಘಟನೆ ಮಾಡಿದರೇ ಪಕ್ಷದವರೇ ಟಿಕೆಟ್ ಮನೆಗೆ ಬಂದು ಕೊಡುತ್ತಾರೆ. ನಾವು ಟಿಕೇಟ್ ಕೇಳುವ ಅವಶ್ಯಕತೆ ಇರುವುದಿಲ್ಲ ಎಂದು ಸಹೋದರ ಲಖನಗೆ ಸಲಹೆ ನೀಡಿದರು.
ಮತ್ತೇ ಮೂರುವರೆ ವರ್ಷದ ನಂತರ ಚುನಾವಣೆ ಬರುತ್ತದೆ. ಆ ಸಮಯದಲ್ಲಿ ನಾವು ಎಲ್ಲರೂ ಸೇರಿ ಕಾಂಗ್ರೇಸ್ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ಕೊಡಬೇಕಾಗಿದೆ. ಮುಂಬರುವ ಮಾರ್ಚ್-ಎಪ್ರೀಲ್ ತಿಂಗಳಲ್ಲಿ ಗ್ರಾ.ಪಂ ಚುನಾವಣೆ ಬರುತ್ತದೆ. ಅದರಲ್ಲಿ ಗೇರೆ ಹೊಡೆದು ನಮ್ಮ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ನಿಲ್ಲಬೇಕು. ನಾವು ಸೋತಿದ್ದರೂ ಕೂಡಾ ಕ್ಷೇತ್ರದ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತೇವೆ. ಕಾರ್ಯಕರ್ತರು ಕಾನೂನು ಬದ್ಧ ಹೋರಾಟ ಮಾಡಬೇಕು. ಕಾನೂನು ವಿರುದ್ಧ ಹೋರಾಟಕ್ಕೆ ನಾವು ಸಹಕಾರ ನೀಡುವುದಿಲ್ಲ ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಲಖನ್ ಜಾರಕಿಹೊಳಿ ಅವರು ಜನರ ಮಧ್ಯೆ ಇರಬೇಕು. ಕ್ಷೇತ್ರದ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಬೇಕು. ಜನರ ಸಮಸ್ಯೆಗಳನ್ನು ಕೇಳಬೇಕು. ನಗರಸಭೆ ಮತ್ತು ತಹಶೀಲ್ದಾರ ಕಚೇರಿ ಸೇರಿದಂತೆ ವಿವಿಧ ಕಛೇರಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಈಗಾಗಲೇ ಪ್ರಮುಖ ನಾಯಕರು ಚುನಾವಣೆಯಲ್ಲಿ ಪ್ರಥಮ ಬಾರಿಗೆ ಸೋತಿದ್ದಾರೆ. ಸೋತರೆ ಅನುಭವ ಬರುತ್ತದೆ. ಈ ನಿಟ್ಟಿನಲ್ಲಿ ಲಖನ್ ಅವರು ಗೋಕಾಕ ಕ್ಷೇತ್ರದ 72 ಹಳ್ಳಿಗಳಿಗೆ ಭೇಟಿ ನೀಡುವದಲ್ಲದೇ ಯಮಕನಮರಡಿಗೂ ಕೂಡಾ ಬಂದು ಅಲ್ಲಿನ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕು. ಕಾಂಗ್ರೇಸ್ ಕಾರ್ಯಕರ್ತರು ತಮ್ಮ ಗ್ರಾಪಂ ವಾರ್ಡಗಳಲ್ಲಿ ನಮಗೆ ಎಷ್ಟು ಮತಗಳು ಬಿದ್ದಿವೆ ಎಂದು ಚಿಂತನೆ ಮಾಡಬೇಕು ಎಂದರು.
ರಮೇಶ್‍ನ ವಿರುದ್ಧ ಸತೀಶ್ ವ್ಯಂಗ್ಯ: ಹೊಸದಾಗಿ ಸೊಸೆ ಮನೆಗೆ ಬಂದಾಗ ಸಿಂಗಾರ ಮಾಡುತ್ತಾರೆ ಅದೇ ರೀತಿ ಉಪ-ಚುನಾವಣೆಯಲ್ಲಿ ರಮೇಶ್‍ಗೆ ಸಿಂಗಾರ ಮಾಡಿದ್ದರು. ಮುಂದೆ ಮೂರುವರ್ಷ ನಂತರ ಹಳೆ ಸೊಸೆಯಾಗುತ್ತಾಳೆ.ಮುಂದೆ ಜನರಲ್ ಚುನಾವಣೆಯಲ್ಲಿ ಯಡಿಯೂರಪ್ಪ 224 ಕ್ಷೇತ್ರಗಳನ್ನು ನೋಡಿಕೊಳ್ಳಬೇಕು. ಬಾಲಚಂದ್ರ ಜಾರಕಿಹೊಳಿ ಅವರ ಕ್ಷೇತ್ರ ನೋಡಬೇಕು. ಆ ಸಮಯದಲ್ಲಿ ಯಾರೂ ಬರುವುದಿಲ್ಲ. ಆವಾಗ ನಿಯಂತ್ರಣ ನಮ್ಮ ಕಡೆ ಇರುತ್ತದೆ ನಾವು ಗೆದ್ದೆ ಗೆಲ್ಲುತ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೇದಿಕೆ ಮೇಲೆ ಲಖನ್ ಜಾರಕಿಹೊಳಿ, ಮಾರುತ್ತೆಪ್ಪ ನಿರ್ವಾಣಿ, ಪ್ರಕಾಶ ಡಾಂಗೆ, ಜಾಕೀರ ನದಾಫ, ಕೆ.ಎಂ ಗೋಕಾಕ, ರಾಮಣ್ಣಾ ತೋಳಿ, ಶಂಕರ ಗಿಡ್ಡನವರ, ಪರಸಪ್ಪ ಚೂನನ್ನವರ, ಬಸವರಾಜ ಹೊಳೆಯಾಚೆ ಇದ್ದರು. ವಿವೇಕ ಜತ್ತಿ ಸ್ವಾಗತಿಸಿ,ವಂದಿಸಿದರು.

Related posts: