RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ:ಗೋಕಾಕ ಉಪಚುನಾವಣೆ : 11 ಅಭ್ಯರ್ಥಿಗಳು ಕಣದಲ್ಲಿ

ಗೋಕಾಕ:ಗೋಕಾಕ ಉಪಚುನಾವಣೆ : 11 ಅಭ್ಯರ್ಥಿಗಳು ಕಣದಲ್ಲಿ 

ಗೋಕಾಕ ಉಪಚುನಾವಣೆ : 11 ಅಭ್ಯರ್ಥಿಗಳು ಕಣದಲ್ಲಿ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 21 :

 

 

ಬರುವ ಡಿಸೆಂಬರ 5 ರಂದು ನಡೆಯಲಿರುವ ಉಪ-ಚುನಾವಣೆಯ ನಾಮಪತ್ರಗಳನ್ನು ಹಿಂಪಡೆಯುವ ದಿನವಾದ ಗುರುವಾರದಂದು ಯಾರೂ ನಾಮಪತ್ರ ಹಿಂಪಡೆಯದೆ ಇರುವದರಿಂದ ಕಣದಲ್ಲಿ 11 ಜನರು ಉಳಿದ್ದಿದ್ದಾರೆ.
ಅಶೋಕ ನಿಂಗಯ್ಯ ಪೂಜಾರಿ (ಜೆಡಿಎಸ್), ರಮೇಶ ಲಕ್ಷ್ಮಣರಾವ ಜಾರಕಿಹೊಳಿ (ಬಿಜೆಪಿ), ಲಖನ್ ಲಕ್ಷ್ಮಣರಾವ ಜಾರಕಿಹೊಳಿ (ಕಾಂಗ್ರೆಸ್), ದೀಪಕ ಉರ್ಫ ಶ್ರೀ ವೆಂಕಟೇಶ್ವರ ಮಹಾಸ್ವಾಮೀಜಿ (ಹಿಂದುಸ್ತಾನ ಜನತಾ ಪಾರ್ಟಿ), ಸಂತೋಷ ನಂದೂರ (ಉತ್ತಮ ಪ್ರಜಾಕೀಯಾ ಪಾರ್ಟಿ), ಅಶೋಕ ಹಂಜಿ (ಸ್ವತಂತ್ರ), ಗುರುಪುತ್ರ ಕುಳ್ಳೂರ (ಸ್ವತಂತ್ರ), ಪ್ರಕಾಶ ಭಾಗೋಜಿ (ಸ್ವತಂತ್ರ), ರಾಮಪ್ಪ ಕುರಬೇಟ (ಸ್ವತಂತ್ರ), ಸತೀಶ ಅಶೋಕ ಪೂಜಾರಿ (ಸ್ವತಂತ್ರ), ಸಂಜಯ ಕುರಬೇಟ (ಸ್ವತಂತ್ರ) ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳಾಗಿದ್ದಾರೆ.

ಕಣದಲ್ಲಿ ಉಳಿದ ಸ್ವತಂತ್ರ ಅಭ್ಯರ್ಥಿ ಪ್ರಕಾಶ ಭಾಗೋಜಿ ಅವರು ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಅವರಿಗೆ ಬೆಂಬಲ ಸೂಚಿಸಿದ್ದಾರೆ.

Related posts: