RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ:ಚುನಾವಣೆಗೆ ಸ್ವರ್ಧಿಸುವಂತೆ ಅಶೋಕ ಪೂಜಾರಿ ಮನೆ ಎದುರು ಬೆಂಬಲಿಗರ ಪ್ರೋಟೆಸ್ಟ್

ಗೋಕಾಕ:ಚುನಾವಣೆಗೆ ಸ್ವರ್ಧಿಸುವಂತೆ ಅಶೋಕ ಪೂಜಾರಿ ಮನೆ ಎದುರು ಬೆಂಬಲಿಗರ ಪ್ರೋಟೆಸ್ಟ್ 

ಚುನಾವಣೆಗೆ ಸ್ವರ್ಧಿಸುವಂತೆ ಅಶೋಕ ಪೂಜಾರಿ ಮನೆ ಎದುರು ಬೆಂಬಲಿಗರ ಪ್ರೋಟೆಸ್ಟ್

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 17 :

ಉಪ ಚುನಾವಣೆಗೆ ಪಕ್ಷೇತರರಾಗಿ ಅಥವಾ ಪಕ್ಷದಿಂದ ಸ್ವರ್ಧಿಸುವಂತೆ ಅಶೋಕ ಪೂಜಾರಿ ಮನೆ ಎದುರು ಬೆಂಬಲಿಗರು ಪ್ರತಿಭಟನೆ ನಡೆಸಿದರು

ರವಿವಾರದಂದು ನಗರದ ಅಂಬಿಗೇರ ಗಲ್ಲಿಯಲ್ಲಿರುವ ಅಶೋಕ್ ಪೂಜಾರಿ ಮನೆಯ ಮುಂದೆ ಬೆಂಬಲಿಗರ ಪ್ರತಿಭಟನೆ ನಡೆಯಿಸಿ ಚುನಾವಣೆಗೆ ಸ್ವರ್ಧಿಸುವಂತೆ ಆಗ್ರಹಿಸಿದ್ದಾರೆ

ನಿನ್ನೆಯಷ್ಟೇ ಕೇಂದ್ರ ಸಚಿವ ಸುರೇಶ ಅಂಗಡಿ ಮತ್ತು ರಮೇಶ್ ಜಾರಕಿಹೊಳಿ ಅಶೋಕ್ ಪೂಜಾರಿ ಮನೆಗೆ ಭೇಟಿ ನಂತರ ರವಿವಾರದಂದು ಅಶೋಕ ಪೂಜಾರಿ ಮನೆ ಎದುರು ಬೆಂಬಲಿಗರಿಂದ ಹೈಡ್ರಾಮಾ ನಡೆದಿದೆ

ಅಶೋಕ ಪೂಜಾರಿ ಪರ ಜಯ ಘೋಷಣೆಗಳನ್ನು ಕೂಗುತ್ತಿರುವ ಬೆಂಬಲಿಗರು ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಬಾರದೂ ಎಂದು ಒತ್ತಾಯ ಮಾಡಿದರಲ್ಲದೆ ಸ್ವತಂತ್ರವಾಗಿರಲಿ ಅಥವಾ ಪಕ್ಷದಿಂದಾಗಿರಲಿ ಉಪ ಚುನಾವಣೆಗೆ ಸ್ಪರ್ಧೆ ಮಾಡಬೇಕು ಯಾವುದೇ ಕಾರಣಕ್ಕೂ ಚುಣಾವಣಾ ಕಣದಿಂದ ಹಿಂದೆ ಸರಿಯಬಾರದು ಎಂದು ಬೆಂಬಲಿಗರ ಪ್ರತಿಭಟನೆ ನಡೆಯಿಸಿ ಚುಣಾವಣೆಗೆ ಸ್ಪರ್ಧೆ ಮಾಡುವವರೆಗೆ ನಾವು ಪ್ರತಿಭಟನೆ ಹಿಂಪಡೆಯೊಲ್ಲ ಎಂದು ಪಟ್ಟು ಹಿಡಿದ ಘಟನೆ ಅಶೋಕ ಪೂಜಾರಿ ಮನೆ ಎದುರು ಕಂಡು ಬಂದವು

Related posts: