RNI NO. KARKAN/2006/27779|Wednesday, January 14, 2026
You are here: Home » breaking news » ಗೋಕಾಕ:ನೆರೆ ಪೀಡಿತರಿಗೆ ಆಹಾರ ಇಲಾಖೆಯ ವೆಬ್‍ಸೈಟ್ ಕಿರಿಕಿರಿ : ಪಡಿತರ ಚೀಟಿಯ ನಕಲು ಪಡೆಯಲು ಪರದಾಡುತ್ತಿರುವ ಜನರು

ಗೋಕಾಕ:ನೆರೆ ಪೀಡಿತರಿಗೆ ಆಹಾರ ಇಲಾಖೆಯ ವೆಬ್‍ಸೈಟ್ ಕಿರಿಕಿರಿ : ಪಡಿತರ ಚೀಟಿಯ ನಕಲು ಪಡೆಯಲು ಪರದಾಡುತ್ತಿರುವ ಜನರು 

ನೆರೆ ಪೀಡಿತರಿಗೆ ಆಹಾರ ಇಲಾಖೆಯ ವೆಬ್‍ಸೈಟ್ ಕಿರಿಕಿರಿ : ಪಡಿತರ ಚೀಟಿಯ ನಕಲು ಪಡೆಯಲು ಪರದಾಡುತ್ತಿರುವ ಜನರು

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 19

 
ಆಹಾರ ಇಲಾಖೆಯ ವೆಬ್‍ಸೈಟ್ ಸತತ ಕೈಕೊಡುತ್ತಿರುವದರಿಂದ ಸಾರ್ವಜನಿಕರಿಗೆ ಅಷ್ಟೇಅಲ್ಲ, ವಿಶೇಷವಾಗಿ ನೆರೆ ಪೀಡಿತರಿಗೆ ಭಾರೀ ತೊಂದರೆಯಾಗಿದ್ದು ಅದಕ್ಕೆ ಪರಿಹಾರವೇ ಕಂಡು ಬರುತ್ತಿಲ್ಲ.

ನೆರೆ ಬಂದಾಗ ಉಟ್ಟ ಬಟ್ಟೆಯ ಮೇಲೆ ಮನೆಯಿಂದ ಹೊರಗೆ ಬಂದಿದ್ದು ಮನೆಯಲ್ಲಿಯ ವಸ್ತುಗಳು ಹಾಗೂ ಕಾಗದಪತ್ರಗಳು ಹಾಳಾಗಿವೆ. ಇಂಥ ಪರಿಸ್ಥಿತಿಯಲ್ಲಿ ನೆರೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಪಡಿತರ ಚೀಟಿ ಅವಶ್ಯಕವಾಗಿದ್ದು ಪಡಿತರ ಚೀಟಿಯ ನಕಲು ಪಡೆಯಬೇಕೆಂದರೆ ಸರ್ವರ್‍ವೇ ದೊರೆಯುತ್ತಿಲ್ಲ. ಇದರಿಂದ ನೆರೆ ಪೀಡಿತರು ಮುಂಜಾನೆಯಿಂದ ಸಂಜೆಯವರೆಗೆ ಮಿನಿ ವಿಧಾನಸೌಧದ ಆಹಾರ ಇಲಾಖೆಯ ಕಾರ್ಯಾಲಯದ ಮುಂದೆ ಕುಳಿತುಕೊಳ್ಳುತ್ತಿದ್ದಾರೆ. ಆಹಾರ ಇಲಾಖೆಯವರು ಸರ್ವರ್ ಇಲ್ಲವೆಂದು ಅವರನ್ನು ಹಿಂತಿರುಗಿ ಕಳಿಸುತ್ತಿದ್ದಾರೆ. ಹೀಗಾಗಿ ನೆರೆ ಪೀಡಿತರಿಗೆ ದಿಕ್ಕು ತೋಚದಂತಾಗಿದೆ.

ನೆರೆ ಪೀಡಿತರ ಪರಿಸ್ಥಿತಿ ಹೀಗಾದರೆ ಪಡಿತರ ಪಡೆಯುವವರ ಸ್ಥಿತಿ ಹೇಳುವದಕ್ಕೆ ಬೇಡ. ಸರ್ವರ್ ಸಿಗದೆ ಇರುವದರಿಂದ ಪಡಿತರ ಅಂಗಡಿಗಳ ಮುಂದೆ ಜನರು ಗಂಟೆಗಟ್ಟಲೆ ನಿಲ್ಲುವದು ಸಾಮಾನ್ಯವಾಗಿದೆ.

ಈ ಬಗ್ಗೆ ಜಿಲ್ಲಾಧಿಕಾರಿಗಳು ವಿಶೇಷ ಗಮನ ನೀಡಬೇಕೆಂದು ಸಾರ್ವಜನಿಕರ ಮನವಿಯಾಗಿದೆ.

Related posts: