RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ:ಅನೈತಿಕ ಸಂಬಂಧ ಹಿನ್ನೆಲೆ : ಗೋಕಾಕಿನಲ್ಲಿ ವ್ಯಕ್ತಿಯ ಕೊಲೆ

ಗೋಕಾಕ:ಅನೈತಿಕ ಸಂಬಂಧ ಹಿನ್ನೆಲೆ : ಗೋಕಾಕಿನಲ್ಲಿ ವ್ಯಕ್ತಿಯ ಕೊಲೆ 

ಅನೈತಿಕ ಸಂಬಂಧ ಹಿನ್ನೆಲೆ : ಗೋಕಾಕಿನಲ್ಲಿ ವ್ಯಕ್ತಿಯ ಕೊಲೆ

ಗೋಕಾಕ ಜು 20:  ಇಲ್ಲಿಗೆ ಸಮೀಪದ ಕಡಬಗಟ್ಟಿ ಗುಡ್ಡದಲ್ಲಿ  ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಪ್ರಕರಣ ಗುರುವಾರ ಬಯಲಿಗೆ ಬಂದಿದ್ದು, ಈ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಹೊಸೂರು ಗ್ರಾಮದ  ಕೆಂಚಪ್ಪಾ  ಸಿದ್ದಪ್ಪ ನೇಗಿನಹಾಳ (50) ಕೊಲೆಯಾಗಿದ್ದು, ಇದು ಸುಪಾರಿ ಕೊಲೆ ಎಂದು ಪೊಲೀಸ್ ವಿಚಾರಣ ವೇಳೆ  ಬೆಳಕಿಗೆ ಬಂದಿದೆ. ಶಿವಾಜಿ ಹೆಳವಗೋಳ,  ಶಂಕರ ದೇಸಿಂಗ, ದುರ್ಗಪ್ಪ ನಂದಿ, ಕರೆಪ್ಪ ಕುಂದರಗಿ ಬಂಧಿತರು. ಅನೈತಿಕ ಸಂಬಂಧ ಮತ್ತು ಜಮೀನು ವಿವಾದಕ್ಕೆ ಸಂಬಂಧಿಸಿದ ಜಗಳದಲ್ಲಿ ಈತನ ಕೊಲೆಗೆ ಪತ್ನಿ ಮತ್ತು ಮಗಳು ಆರೋಪಿಗಳಿಗೆ ಸುಪಾರಿ ನೀಡಿದ್ದರು ಎಂದು ವಿಚಾರಣೆ ವೇಳೆ ಬಯಲಾಗಿದೆ.

ಕಡಬಗಟ್ಟಿ ಗುಡ್ಡಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿದ ನಂತರ ಗುಂಡಿಯಲ್ಲಿ ಶವವನ್ನು ಮುಚ್ಚಿ ಹಾಕಿದ ಬಗ್ಗೆ  ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

ಡಿಸಿಬಿ ಸಿಪಿಐ ಎಸ್.ಆರ್.ಕಟ್ಟೀಮನಿ ನೇತೃತ್ವದ ತಂಡ ತನಿಖೆ ನಡೆಸಿ ಪ್ರಕರಣ ಬಯಲಿಗೆಳೆದಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related posts: